ಕರ್ನಾಟಕ

karnataka

ETV Bharat / sports

ವೇಗವಾಗಿ 2000 ರನ್​: 8 ವರ್ಷಗಳ ಹಿಂದಿನ ಸಚಿನ್​ ದಾಖಲೆ ಮುರಿದ ಕೆಎಲ್ ರಾಹುಲ್​ - ವೇಗವಾಗಿ 2000 ರನ್

ಒಟ್ಟಾರೆ ಐಪಿಎಲ್​ನಲ್ಲಿ ವೇಗವಾಗಿ 2000 ರನ್​ ಪೂರೈಸಿರುವ ದಾಖಲೆ ವಿಂಡೀಸ್​ ದೈತ್ಯ ಕ್ರಿಸ್​ ಗೇಲ್​ ಹೆಸರಿನಲ್ಲಿದೆ. ಅವರು ಕೇವಲ ಈ ದಾಖಲೆಗೆ ಕೇವಲ 48 ಇನ್ನಿಂಗ್ಸ್​ ತೆಗೆದುಕೊಂಡಿದ್ದರು. 2ನೇ ಸ್ಥಾನದಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್​ ತಂಡದಲ್ಲಿ ಆಡಿದ್ದ ಶಾನ್ ಮಾರ್ಶ್​ 52 ಇನ್ನಿಂಗ್ಸ್​ಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ್ದರು.

ಕೆಎಲ್ ರಾಹುಲ್​ ವೇಗವಾಗಿ 2000 ರನ್
ಕೆಎಲ್ ರಾಹುಲ್​ ವೇಗವಾಗಿ 2000 ರನ್

By

Published : Sep 24, 2020, 9:01 PM IST

ದುಬೈ: ಕಿಂಗ್ಸ್​ ಇಲೆವೆನ್ ಪಂಜಾಬ್​ ತಂಡದ ನಾಯಕ ಕೆಎಲ್ ರಾಹುಲ್​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ವಿರುದ್ಧದ ಪಂದ್ಯದಲ್ಲಿ 2000 ರನ್​ ಪೂರೈಸಿದ್ದಾರೆ. ಈ ಮೂಲಕ ವೇಗವಾಗಿ ಈ ಸಾಧನೆ ಮಾಡಿದ 3ನೇ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ.

ಉಮೇಶ್ ಯಾದವ್ ಎಸೆದ ಮೊದಲ ಓವರ್​ನಲ್ಲಿ ಬೌಂಡರಿಗಟ್ಟುವ ಮೂಲಕ ರಾಹುಲ್​ ಈ ಮೈಲಿಗಲ್ಲನ್ನು ತಲುಪಿದರು. ಈ ಮೂಲಕ ಅತಿ ಕಡಿಮೆ ಇನ್ನಿಂಗ್ಸ್​ನಲ್ಲಿ ಈ 2000 ರನ್​ ಗಳಿಸಿದ ಭಾರತೀಯ ಹಾಗೂ ವೇಗವಾಗಿ ಈ ಸಾಧನೆ ಮಾಡಿದ 3ನೇ ಬ್ಯಾಟ್ಸ್​ಮನ್​ ಎನಿಸಿಕೊಂಡರು. ರಾಹುಲ್​ಗಿತ ಮೊದಲು ಸಚಿನ್ ತೆಂಡೂಲ್ಕರ್​ 63 ಇನ್ನಿಂಗ್ಸ್​ಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ್ದರು. ರಾಹುಲ್​ 60 ಇನ್ನಿಂಗ್ಸ್​ಗಳಲ್ಲಿ 2 ಸಾವಿರ ಪೂರೈಸಿದ್ದಾರೆ.

ಒಟ್ಟಾರೆ ಐಪಿಎಲ್​ನಲ್ಲಿ ವೇಗವಾಗಿ 2000 ರನ್​ ಪೂರೈಸಿರುವ ದಾಖಲೆ ವಿಂಡೀಸ್​ ದೈತ್ಯ ಕ್ರಿಸ್​ ಗೇಲ್​ ಹೆಸರಿನಲ್ಲಿದೆ. ಅವರು ಕೇವಲ ಈ ದಾಖಲೆಗೆ ಕೇವಲ 48 ಇನ್ನಿಂಗ್ಸ್​ ತೆಗೆದುಕೊಂಡಿದ್ದರು. 2ನೇ ಸ್ಥಾನದಲ್ಲಿ ಕಿಂಗ್ಸ್​ ಇಲೆವೆನ್ ಪಂಜಾಬ್​ ತಂಡದಲ್ಲಿ ಆಡಿದ್ದ ಶಾನ್ ಮಾರ್ಶ್​ 52 ಇನ್ನಿಂಗ್ಸ್​ಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ್ದರು.

ಉಳಿದಂತೆ, ಶೇನ್ ವಾಟ್ಸನ್(64) ಗೌತಮ್ ಗಂಭೀರ್​(68) ಶೇನ್​ಐಪಿಎಲ್​ ಕಿಂಗ್ ಸುರೇಶ್ ರೈನಾ(69), ಸೆಹ್ವಾಗ್​(70),ಶಿಖರ್ ಧವನ್​(74) ರಾಹುಲ್ ದ್ರಾವಿಡ್​(75), ಧೋನಿ(75), ವಿಲಿಯರ್ಸ್​(76)ರೋಹಿತ್ ಶರ್ಮಾ (77) ಗಿಲ್​ಕ್ರಿಸ್ಟ್​(78),ವಿರಾಟ್​ ಕೊಹ್ಲಿ(79) ನಂತರದ ಸ್ಥಾನದಲ್ಲಿದ್ದಾರೆ.

ABOUT THE AUTHOR

...view details