ಕರ್ನಾಟಕ

karnataka

ETV Bharat / sports

ರೈತರು ರಾಷ್ಟ್ರದ ಜೀವನಾಡಿ, ಈ ಬಿಕ್ಕಟ್ಟಿನ ಸಮಯದಲ್ಲಿ ಒಗ್ಗಟ್ಟಾಗಿ ನಿಲ್ಲೋಣ ಎಂದ ಯುವಿ! - ಕೃಷಿ ಕಾಯ್ದೆ 2020

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆ ವಿರುದ್ಧದ ಹೋರಾಟ ಇದೀಗ ಮತ್ತೊಂದು ರೂಪ ಪಡೆದುಕೊಂಡಿದ್ದು, ಇದೀಗ ಎಲ್ಲ ವಲಯಗಳಿಂದಲೂ ಪರ - ವಿರೋಧ ವಾದ ಕೇಳಿ ಬರುತ್ತಿವೆ.

Yuvraj Singh
Yuvraj Singh

By

Published : Feb 4, 2021, 3:48 PM IST

ನವದೆಹಲಿ:ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆ ವಿಚಾರವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲು ಶುರು ಮಾಡ್ತಿದ್ದಂತೆ ಅನೇಕ ಸ್ಟಾರ್​ ಸೆಲಿಬ್ರೆಟಿಗಳು ಟ್ವೀಟ್ ಮಾಡಲು ಶುರು ಮಾಡಿದ್ದಾರೆ.

ಅಂತಾರಾಷ್ಟ್ರೀಯ ಪಾಪ್ ಸಿಂಗರ್​ ರಿಹಾನ್ನಾ ಟ್ವೀಟ್ ಮಾಡಿದ ನಂತರ ಅನೇಕರು ಇದೇ ವಿಚಾರವಾಗಿ ತಮ್ಮ ಟ್ವಿಟರ್​ನಲ್ಲಿ ಅಭಿಪ್ರಾಯ ಹೊರಹಾಕುತ್ತಿದ್ದು, ಇದೀಗ ಟೀಂ ಇಂಡಿಯಾ ಮಾಜಿ ಆಲ್​ರೌಂಡರ್​ ಯುವರಾಜ್ ಸಿಂಗ್ ಕೂಡ ಇದೇ ವಿಚಾರವನ್ನಿಟ್ಟುಕೊಂಡು ಟ್ವೀಟ್ ಮಾಡಿದ್ದಾರೆ.

ಓದಿ: ನಿಲ್ಲದ ಕೃಷಿ ಕಾಯ್ದೆ ಪ್ರತಿಭಟನೆ: ಸ್ಟಾರ್​ ವಾರ್​ ರೂಪ, ಪರ - ವಿರೋಧ ತೀವ್ರ ಚರ್ಚೆ!

ಭಾರತದ ಹೆಮ್ಮೆಯ ಪ್ರಜೆಗಳ ಬಗ್ಗೆ ನನಗೆ ಹೆಮ್ಮೆ ಇದೆ. ಈ ಬಿಕ್ಕಟ್ಟಿನ ಸಮಯದಲ್ಲಿ ನಾವು ಒಗ್ಗಟ್ಟಾಗಿ ನಿಲ್ಲೋಣ. ಪರಿಹರಿಸಲಾಗದ ಯಾವುದೇ ಸಮಸ್ಯೆ ಇಲ್ಲ. ನಮ್ಮ ರೈತ ಸಮುದಾಯವು ಈ ರಾಷ್ಟ್ರದ ಜೀವನಾಡಿಯಾಗಿದ್ದು, ಶೀಘ್ರದಲ್ಲೇ ಶಾಂತಿಯುತ ಪರಿಹಾರ ಸಿಗಲಿದೆ ಎಂಬ ವಿಶ್ವಾಸ ನನಗಿದೆ ಎಂದಿರುವ ಅವರು ಇಂಡಿಯಾ ಟುಗೆದರ್​ ಎಂದು ಟ್ವೀಟ್ ಮಾಡಿದ್ದಾರೆ.

ಇದೇ ವಿಚಾರವಾಗಿ ಟೀಂ ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ ಕೂಡ ಟ್ವೀಟ್ ಮಾಡಿದ್ದು, ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲೋಣ. ಭಾರತದ ಅಭಿವೃದ್ಧಿಯಲ್ಲಿ ರೈತರ ಪಾತ್ರ ಅತಿ ಮುಖ್ಯವಾಗಿದ್ದು, ಈ ಸಂದರ್ಭದಲ್ಲಿ ಪರಿಹಾರ ಕಂಡುಕೊಳ್ಳಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮವಹಿಸಬೇಕಾಗಿದೆ. ಒಗ್ಗಟ್ಟಿನಿಂದ ಪರಿಹಾರ ಹುಡುಕಬೇಕಿದೆ ಎಂದಿದ್ದಾರೆ.

ABOUT THE AUTHOR

...view details