ಮುಂಬೈ: ವಿಶ್ವದ ನಂಬರ್ 1 ಬೌಲರ್, ಯಾರ್ಕರ್ ಕಿಂಗ್ ಜಸ್ಪ್ರೀತ್ ಬುಮ್ರಾ ಓರ್ವ ಬೇಬಿ ಬೌಲರ್ ಎಂದು ಹಗುರವಾಗಿ ಮಾತನಾಡಿದ್ದ ಪಾಕ್ನ ಮಾಜಿ ಕ್ರಿಕೆಟರ್ಗೆ ಇದೀಗ ನೆಟಿಜನ್ಸ್ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.
ಪಾಕಿಸ್ತಾನದ ಖಾಸಗಿ ಸುದ್ದಿವಾಹಿನಿಯಲ್ಲಿ ಮಾತನಾಡಿದ್ದ ಅಬ್ದುಲ್ ರಜಾಕ್, ವಿಶ್ವದ ನಂಬರ್ ಒನ್ ಬೌಲರ್ಗಳಾಗಿದ್ದ ಗ್ಲೆನ್ ಮೆಕ್ಗ್ರಾಥ್, ವಾಸೀಂ ಅಕ್ರಂ, ಶೋಯೆಬ್ ಅಖ್ತರ್ನಂತಹ ಬೌಲರ್ಗಳನ್ನ ನಾನು ಸುಲಭವಾಗಿ ಎದುರಿಸಿದ್ದೇನೆ. ಇದೀಗ ಬುಮ್ರಾ ಒರ್ವ ಬೇಬಿ ಬೌಲರ್ ಅವರನ್ನ ಎದುರಿಸುವ ಸಾಮರ್ಥ್ಯ ನನ್ನ ಬಳಿ ಇದೆ. ಒಂದು ವೇಳೆ ನಾನು ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿದಾಗ ಬುಮ್ರಾ ಬೌಲಿಂಗ್ ಮಾಡುವ ಬದಲು ಒತ್ತಡಕ್ಕೊಳಗಾಗುತ್ತಾರೆ ಎಂದು ಹೇಳಿದ್ದರು.