ಕೋಲ್ಕತಾ: ಬಿಸಿಸಿಐ ಅಧ್ಯಕ್ಷ ಮತ್ತು ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಇಂದಿನ ಬದಲು ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ.
ಗಂಗೂಲಿ ಡಿಸ್ಚಾರ್ಜ್ ಸಮಯ ಬದಲು: ಇನ್ನೊಂದು ದಿನ ಆಸ್ಪತ್ರೆಯಲ್ಲೇ ಉಳಿಯಲು ದಾದಾ ನಿರ್ಧಾರ! - ಕ್ರಿಕೆಟಿಗ ಸೌರವ್ ಗಂಗೂಲಿ
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗುವ ಬಗ್ಗೆ ಮಾಹಿತಿ ತಿಳಿದ ಅಭಿಮಾನಿಗಳು ದಾದಾ ಅವರನ್ನು ಕಾಣಲು ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ.
ಜನವರಿ 2 ರಂದು ಲಘು ಹೃದಯಾಘಾತದ ಬಳಿಕ ಕೋಲ್ಕತ್ತಾದ ವುಡ್ಲ್ಯಾಂಡ್ಸ್ ಆಸ್ಪತ್ರೆಯಲ್ಲಿ ಆಂಜಿಯೋಪ್ಲಾಸ್ಟಿಗೆ ಒಳಗಾಗಿದ್ದ ಗಂಗೂಲಿ ಇಂದು ಬಿಡುಗಡೆಯಾಗಲಿದ್ದಾರೆ ಎಂದು ಆಸ್ಪತ್ರೆ ಅಧಿಕೃತವಾಗಿ ಮಾಹಿತಿ ನೀಡಿತ್ತು. ಆದರೆ ಸ್ವತಃ ಗಂಗೂಲಿ ಅವರೆ ನಾಳೆ ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಗಂಗೂಲಿ ಅವರು ಪ್ರಾಯೋಗಿಕವಾಗಿ ಫಿಟ್ ಆಗಿದ್ದಾರೆ. ಅವರು ಇಂದು ಆಸ್ಪತ್ರೆಯಲ್ಲಿ ಉಳಿಯಲು ಬಯಸಿದ್ದರು, ಆದ್ದರಿಂದ ಅವರು ನಾಳೆ ಮನೆಗೆ ತೆರಳಲಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಸೌರವ್ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಾರೆ ಎಂಬ ಸುದ್ದಿ ತಿಳಿದ ನೂರಾರು ಅಭಿಮಾನಿಗಳು ಕೋಲ್ಕತ್ತಾದ ವುಡ್ಲ್ಯಾಂಡ್ಸ್ ಆಸ್ಪತ್ರೆ ಮುಂದೆ ಜಮಾಯಿಸಿದ್ದು, ದಾದಾ.. ದಾದಾ.. ಎಂದು ಘೋಷಣೆ ಕೂಗುತ್ತಿದ್ದಾರೆ. ಬಿಡುಗಡೆಯಾದ ಬಳಿಕ ಗಂಗೂಲಿ ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳಲಿದ್ದಾರೆ.