ಲಂಡನ್: 2019ರ ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ರೂವಾರಿಯಾದ ಬೆನ್ಸ್ಟೋಕ್ಸ್ರನ್ನು ಕ್ರಿಕೆಟ್ ದೇವರು ಸಚಿನ್ಗೆ ಹೋಲಿಕೆ ಮಾಡಿ ಟ್ವೀಟ್ ಮಾಡಿದ್ದ ಕ್ರಿಕೆಟ್ ವಿಶ್ವಕಪ್ ಅಫಿಶೀಯಲ್ ಟ್ವಿಟರ್ ಅಡ್ಮಿನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಫೈನಲ್ ಪಂದ್ಯದಲ್ಲಿ 84 ರನ್ಗಳಿಸಿದ ಬೆನ್ ಸ್ಟೋಕ್ಸ್ ಕಿವೀಸ್ ವಿರುದ್ಧ ಟೈ ಆಗಲು ನೆರವಾಗಿದ್ದರು. ನಂತರ ಸೂಪರ್ ಓವರ್ನಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ 2 ಬೌಂಡರಿ ಬಾರಿಸಿದ್ದರು. ಕೊನೆಗೆ ಅದು ಟೈ ಆಗಿದ್ದರಿಂದ ಇಂಗ್ಲೆಂಡ್ ತಂಡವನ್ನು ಬೌಂಡರಿಗಳ ಅಧಾರದ ಮೇಲೆ ವಿಜೇತ ತಂಡವೆಂದು ಘೋಷಿಸಲಾಯಿತು.
ಇದಾದ ನಂತರ ಫೈನಲ್‌ನಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ವಿಶ್ವಕಪ್ ಚಾಂಪಿಯನ್ ಆಗಲು ನೆರವಾಗಿದ್ದ ಸ್ಟೋಕ್ಸ್, ಸಚಿನ್ರಿಂದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಫೋಟೋವನ್ನು ವಿಶ್ವಕಪ್ ಟ್ವಿಟರ್ ಅಧಿಕಾರಿಗಳು ಎಲ್ಲಾ ಕಾಲದ ಅತ್ಯುತ್ತಮ ಕ್ರಿಕೆಟರ್ ಮತ್ತು ಸಚಿನ್ ತೆಂಡೂಲ್ಕರ್ ಎಂದು ಟ್ವೀಟ್ ಮಾಡಿದ್ದರು.
ಸಚಿನ್ ಜೊತೆ ಸ್ಟೋಕ್ಸ್ರನ್ನು ಹೋಲಿಕೆ ಮಾಡಿದ್ದಕ್ಕೆ ರೊಚ್ಚಿಗೆದ್ದಿರುವ ಭಾರತೀಯ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿನ್ ತಮ್ಮ ವೃತ್ತಿ ಜೀವನದಲ್ಲಿ 34,357 ರನ್ಗಳಿಸಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ 100 ಶತಕ ಸಿಡಿಸಿದ್ದಾರೆ. ಆದರೆ ಕೇವಲ ಟೆಸ್ಟ್ನಲ್ಲಿ 51 ಹಾಗೂ ಏಕದಿನ ಕ್ರಿಕೆಟ್ನಲ್ಲಿ 49 ಪಂದ್ಯಗಳನ್ನಾಡಿರುವ ಸ್ಟೋಕ್ಸ್ರನ್ನು ಹೋಲಿಕೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಅಭಿಮಾನಿಗಳು ಐಸಿಸಿ ವಿರುದ್ಧ ತಿರುಗಿ ಬಿದ್ದಿದ್ದಾರೆ.