ಮುಂಬೈ: ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ರನ್ನು ಕಡೆಗಣಿಸಿ ಯುವ ಆಟಗಾರರಾದ ಟಾಮ್ ಕರ್ರನ್ ಮತ್ತು ಶಿಮ್ರಾನ್ ಹೆಟ್ಮೆಯರ್ಗೆ ಅವಕಾಶ ನೀಡಿರುವ ಡೆಲ್ಲಿ ನಿರ್ಣಯಕ್ಕೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಮುಂಬೈನ ವಾಂಖೆಡೆಯಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯಲ್ಲಿ ಡೆಲ್ಲಿ ತಂಡ ಸಿಎಸ್ಕೆ ತಂಡವನ್ನು ಎದುರಿಸುತ್ತಿದೆ. ಲೀಗ್ನ ಚೊಚ್ಚಲ ಪಂದ್ಯದ 11ರ ಬಳಗದಲ್ಲಿ ವೈಟ್ ಬಾಲ್ ಟೂರ್ನಿಯಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿದ್ದ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ರನ್ನು ಕಡೆಗಣಿಸಿ ವೆಸ್ಟ್ ಇಂಡೀಸ್ನ ಹೆಟ್ಮೆಯರ್ ಮತ್ತು ಇಂಗ್ಲೆಂಡ್ನ ಟಾಮ್ ಕರ್ರನ್ಗೆ ಅವಕಾಶ ನೀಡಿದೆ.
ಕರ್ರನ್ ಇತ್ತೀಚೆಗೆ ಭಾರತದ ವಿರುದ್ಧ ನಡೆದ ಸೀಮಿತ ಓವರ್ಗಳ ಪಂದ್ಯದಲ್ಲಿ ದುಬಾರಿಯಾಗಿದ್ದರು. ಇನ್ನು ಹೆಟ್ಮೆಯರ್ ಐಪಿಎಲ್ನಲ್ಲಿ 18 ಪಂದ್ಯಗಳನ್ನಾಡಿ ಕೇವಲ 1 ಅರ್ಧಶತಕ ಬಾರಿಸಿದ್ದಾರೆ. ಅಂತಹದಲ್ಲಿ ಟೂರ್ನಿಯಲ್ಲಿ 2 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಸ್ಮಿತ್ಗೆ ಅವಕಾಶ ನೀಡದಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಅಲ್ಲದೆ ಭಾರತದ ವಿರುದ್ಧ ಕಳೆದ ಡಿಸೆಂಬರ್ನಲ್ಲಿ ನಡೆದಿದ್ದ ಏಕದಿನ ಸರಣಿಯಲ್ಲಿ 3 ಪಂದ್ಯಗಳಲ್ಲಿ 148ರ ಸ್ಟ್ರೈಕ್ ರೇಟ್ನಲ್ಲಿ 216 ರನ್ ಗಳಿಸಿದ್ದರು.