ಕರ್ನಾಟಕ

karnataka

ETV Bharat / sports

ಭಾರತೀಯ ಸ್ಪಿನ್​ ದಾಳಿ ಪುಡಿಗಟ್ಟಲು ನೆರವಾದ ವಿಷಯ ಬಹಿರಂಗೊಳಿಸಿದ ಜೇಸನ್ ರಾಯ್ - ಸ್ಪಿನ್ನರ್​ಗಳ ವಿರುದ್ಧ ರಾಯ್​ ಉತ್ತಮ ಬ್ಯಾಟಿಂಗ್

ತಂಡಕ್ಕೆ ಆರಾಮದಾಯಕ ಗೆಲುವಿಗಾಗಿ ನಾನು ಕೊಡುಗೆ ನೀಡುವುದಕ್ಕೆ ಬಯಸುತ್ತೇನೆ. ನಾವು ಫೀಲ್ಡ್​ ಮಾಡಿದ ರೀತಿಗೆ ತುಂಬಾ ಸಂತೋಷವಿದೆ. ನಾನು ಈ ಹಿಂದೆ ಕೆಲವು ಬೌಲರ್​ಗಳಿಗೆ ವಿವಿಧ ರೀತಿಯಲ್ಲಿ ವಿಕೆಟ್​ ಒಪ್ಪಿಸಿದ್ದೆ. ಆದರೆ, ನೆಟ್ಸ್​ನಲ್ಲಿ ರಶೀದ್​ ಬೌಲಿಂಗ್ ಆಡಿದ್ದು..

ಭಾರತ vs ಇಂಗ್ಲೆಂಡ್ ಟಿ20
ಜೇಸನ್ ರಾಯ್​

By

Published : Mar 13, 2021, 4:11 PM IST

ಅಹ್ಮದಾಬಾದ್ ​:ಸ್ಪಿನ್ನರ್ ಆದಿಲ್​ ರಶೀದ್​ ಅವರ ಬೌಲಿಂಗ್‌ನ ನೆಟ್ಸ್​ನಲ್ಲಿ ಎದುರಿಸಿದ್ದೆ. ಇದು ಮೊದಲ ಟಿ20 ಪಂದ್ಯ ಭಾರತೀಯ ಸ್ಪಿನ್ನರ್​ಗಳ ವಿರುದ್ಧ ಉತ್ತಮ ಬ್ಯಾಟಿಂಗ್ ನಡೆಸಲು ನೆರವಾಯಿತು ಎಂದು ಇಂಗ್ಲೆಂಡ್ ಬ್ಯಾಟ್ಸ್​ಮನ್​ ಜೇಸನ್ ರಾಯ್ ತಿಳಿಸಿದ್ದಾರೆ.

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೊದಲ ಟಿ20 ಪಂದ್ಯವನ್ನು 27 ಎಸೆತಗಳು ಉಳಿದಿರುವಂತೆ ಭಾರತ ತಂಡವನ್ನು 8 ವಿಕೆಟ್​ಗಳಿಂದ ಮಣಿಸಿದ ನಂತರ ರಾಯ್​ ಈ ಮಾತನ್ನ ಹೇಳಿದ್ದಾರೆ. 125 ರನ್​ಗಳನ್ನು ಚೇಸ್​ ಮಾಡುವಾಗ ಬಟ್ಲರ್​ ಜೊತೆ ಮೊದಲ ವಿಕೆಟ್​ಗೆ 72 ರನ್​ಗಳ ಜೊತೆಯಾಟ ನೀಡಿದ ರಾಯ್​, ಕೇವಲ 32 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್​ ಸಹಿತ 49 ರನ್​ ಗಳಿಸಿದ್ದರು.

"ಗೆಲುವಿನೊಂದಿಗೆ ಸರಣಿ ಆರಂಭ ಮಾಡಿರುವುದಕ್ಕೆ ಖುಷಿಯಿದೆ. ತಂಡಕ್ಕೆ ಆರಾಮದಾಯಕ ಗೆಲುವಿಗಾಗಿ ನಾನು ಕೊಡುಗೆ ನೀಡುವುದಕ್ಕೆ ಬಯಸುತ್ತೇನೆ. ನಾವು ಫೀಲ್ಡ್​ ಮಾಡಿದ ರೀತಿಗೆ ತುಂಬಾ ಸಂತೋಷವಿದೆ. ನಾನು ಈ ಹಿಂದೆ ಕೆಲವು ಬೌಲರ್​ಗಳಿಗೆ ವಿವಿಧ ರೀತಿಯಲ್ಲಿ ವಿಕೆಟ್​ ಒಪ್ಪಿಸಿದ್ದೆ. ಆದರೆ, ನೆಟ್ಸ್​ನಲ್ಲಿ ರಶೀದ್​ ಬೌಲಿಂಗ್ ಆಡಿದ್ದು, ಈ ಪಂದ್ಯದಲ್ಲಿ ತುಂಬಾ ಅನುಕೂಲವಾಯಿತು" ಎಂದು ಪಂದ್ಯ ಮುಗಿದ ನಂತರ ಹೇಳಿದ್ದಾರೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಶ್ರೇಯಸ್​ ಅಯ್ಯರ್ ಅವರ 67 ರನ್​ಗಳ ಹೊರೆತಾಗಿಯೂ 20 ಓವರ್​ಗಳಲ್ಲಿ 124 ರನ್​ಗಳಿಸಲಷ್ಟೇ ಶಕ್ತವಾಯಿತು. ಆರ್ಚರ್​ 3, ರಶೀದ್​, ಮಾರ್ಕ್​ವುಡ್​ ಸ್ಟೋಕ್ಸ್​ ಮತ್ತು ಜೋರ್ಡನ್​ ತಲಾ ಒಂದು ವಿಕೆಟ್​ ಪಡೆದು ಮಿಂಚಿದ್ದರು.

ಇದನ್ನು ಓದಿ:ಭಾರತ ತಂಡಕ್ಕೆ ದೊಡ್ಡ ತಲೆನೋವಾದ ಕೊಹ್ಲಿಯ ಸತತ ಡಕ್​ ಔಟ್ಸ್​

ABOUT THE AUTHOR

...view details