ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಆಟಗಾರರನ್ನು ಗುರಿಯಾಗಿಸಿಕೊಂಡು ನಿಂದನೆ ಮಾಡಿದ್ದಕ್ಕಾಗಿ ಕೆಲವು ಪ್ರೇಕ್ಷಕರನ್ನು ಹೊರಹಾಕಿದ ನಂತರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಜನಾಂಗೀಯ ನಿಂದನೆ ನಮಗೇನು ಹೊಸದಲ್ಲ ಎಂದು ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
ನಾಲ್ಕನೇ ದಿನದಾಟದ ನಂತರ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಅಶ್ವಿನ್, "ಸಿಡ್ನಿಯಲ್ಲಿ ಈ ಹಿಂದೆಯೂ ಸಾಕಷ್ಟು ಬಾರಿ ಜನಾಂಗೀಯ ನಿಂದನೆಗೆ ಒಳಗಾಗಿದ್ದೇವೆ. ಇದನ್ನೂ ಕಬ್ಬಿಣದ ಮುಷ್ಠಿಯಿಂದ ಎದುರಿಸಬೇಕಿದೆ" ಎಂದಿದ್ದಾರೆ.
2011ರಲ್ಲಿ ವರ್ಣಭೇದ ನೀತಿ ಎಂದರೇನು ಮತ್ತು ಅದರಿಂದ ನಾವು ಹೇಗೆ ಸಣ್ಣವರಾಗುತ್ತೇವೆ ಎಂದು ನನಗೆ ತಿಳಿದಿರಲಿಲ್ಲ ಎಂದು ಅಶ್ವಿನ್ ಈ ಹಿಂದೆ ನಡೆದ ಘಟನೆ ಏಕೆ ಹೆಚ್ಚು ದೊಡ್ಡದಾಗಲಿಲ್ಲ ಎಂಬುವುದನ್ನ ವಿವರಿಸಿದ್ದಾರೆ.