ಕರ್ನಾಟಕ

karnataka

ETV Bharat / sports

ಸೆಹ್ವಾಗ್​ರಂತೆ ಬ್ಯಾಟ್​ ಬೀಸುವ 15 ವರ್ಷದ ಶೆಫಾಲಿಗೆ ಸಚಿನ್​ರಂತಾಗುವ ಆಸೆ- ವಿಡಿಯೋ - 15 year old shefali varma,

ವಿಂಡೀಸ್​ ವಿರುದ್ಧದ ಕಳೆದ ಎರಡು ಟಿ20 ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಕ್ರಿಕೆಟ್​ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿರುವ ಶೆಫಾಲಿ ವರ್ಮಾ ಕ್ರಿಕೆಟ್​ ಆಯ್ದುಕೊಂಡಿರುವುದೇ ಸಚಿನ್​ರಿಂದಾಗಿಯಂತೆ. ಸ್ವತಃ ಈ ವಿಚಾರವನ್ನು ಈಟಿವಿ ಭಾರತ್​ ನಡೆಸಿದ ಸಂದರ್ಶನದಲ್ಲಿ ಶೆಫಾಲಿ ಪೋಷಕರು ತಿಳಿಸಿದ್ದಾರೆ.

Shafali Verma

By

Published : Nov 12, 2019, 1:46 PM IST

ರೊಹ್ಟಕ್​: ಕೇವಲ 15 ವರ್ಷ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಮಿಂಚುತ್ತಿರುವ ಹರಿಯಾಣದ ಶೆಫಾಲಿ ವರ್ಮಾ ಸಚಿನ್​ ತೆಂಡೂಲ್ಕರ್​ರನ್ನು ಅನುಕರಣೆ ಮಾಡುತ್ತಿದ್ದಾರೆ.

ವಿಂಡೀಸ್​ ವಿರುದ್ಧದ ಕಳೆದ ಎರಡು ಟಿ20 ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿ ಕ್ರಿಕೆಟ್​ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿರುವ ಶೆಫಾಲಿ ವರ್ಮಾ ಕ್ರಿಕೆಟ್​ ಆಯ್ದುಕೊಂಡಿರುವುದೇ ಸಚಿನ್​ರಿಂದಾಗಿಯಂತೆ. ಸ್ವತಃ ಈ ವಿಚಾರವನ್ನು ಈಟಿವಿ ಭಾರತ್​ ನಡೆಸಿರುವ ಸಂದರ್ಶನದಲ್ಲಿ ಶೆಫಾಲಿ ಅವರ ಪೋಷಕರು ತಿಳಿಸಿದ್ದಾರೆ.

ವಿಂಡೀಸ್​ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ 30 ವರ್ಷಗಳಿಂದ ಸಚಿನ್​ ಹೆಸರಿನಲ್ಲಿದ್ದ ಅರ್ಧಶತಕ ಸಿಡಿಸಿದ ಅತ್ಯಂತ ಕಿರಿಯ ಭಾರತೀಯ ಕ್ರಿಕೆಟಿಗ ಎಂಬ ದಾಖಲೆಯನ್ನು ಈಗ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ ಶೆಫಾಲಿ.

ಈಟಿವಿ ಭಾರತ​ನೊಂದಿಗೆ ಮಾತನಾಡಿದ​ ಶೆಫಾಲಿ ವರ್ಮಾ ತಂದೆ-ತಾಯಿ

ಈಟಿವಿ ಭಾರತ ಜೊತೆ ಮಾತನಾಡಿದ ಶೆಫಾಲಿ ತಾಯಿ ಪರ್ವೀನ್​ ಬಾಲಾ ಮತ್ತು ಅವರ ತಂದೆ ಸಂಜೀವ್​ ವರ್ಮಾ ಅವರು ತಮ್ಮ ಮಗಳು ಆರಂಭದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಯಶಸ್ಸುನ್ನು ಕಾಣುತ್ತಿರುವುದನ್ನು ಕಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಶೆಫಾಲಿ ಸಚಿನ್​ ತೆಂಡೂಲ್ಕರ್​ ಅವರ ಬಹುದೊಡ್ಡ ಅಭಿಮಾನಿಯಾಗಿದ್ದು, ಅವಳು ಕ್ರಿಕೆಟ್​ ಆಟವನ್ನು ಆಯ್ದಕೊಳ್ಳಲು ಸಚಿನ್​ ಅವರೇ ಕಾರಣ. ಅವರೇ ಶೆಫಾಲಿಗೆ ಸ್ಫೂರ್ತಿಯಾಗಿದ್ದಾರೆ ಎಂದಿದ್ದಾರೆ.

ಶೆಫಾಲಿ ತಂದೆಗೆ ತಮ್ಮ ಮಗಳು ಸಚಿನ್​ ರಂತೆ ಕ್ರಿಕೆಟ್​ನಲ್ಲಿ ದೊಡ್ಡ ಹೆಸರು ಮಾಡಬೇಕು ಹಾಗೂ ಹಲವಾರು ದಾಖಲೆಗಳನ್ನು ಸೃಷ್ಟಿಸಬೇಕು ಎಂದು ಮಗಳಿಗೆ ಸ್ಪೂರ್ತಿ ತುಂಬುವುದರ ಜೊತೆ ಆಶೀರ್ವಾದ ಸಹ ಮಾಡಿದ್ದಾರೆ.

ABOUT THE AUTHOR

...view details