ಹೈದರಾಬಾದ್ :ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಆಸೀಸ್ ಕ್ರಿಕೆಟಿಗ ಸ್ಟೀವನ್ ಸ್ಮಿತ್ ಈ ಪೀಳಿಗೆಯ ಅತ್ಯುತ್ತಮ ಟೆಸ್ಟ್ ಆಟಗಾರರಾಗಿದ್ದಾರೆ. ಆದರೆ, ಇಂಗ್ಲೆಂಡ್ ಸ್ಪಿನ್ನರ್ ಮಾಂಟಿ ಪನೇಸರ್ ಅವರ ಸಾರ್ವಕಾಲಿಕ ಟೆಸ್ಟ್ ಇಲೆವೆನ್‌ನಲ್ಲಿ ಇವರಿಬ್ಬರಿಗೆ ಸ್ಥಾನ ನೀಡಿಲ್ಲ.
ಪ್ರಸ್ತುತ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಕ್ರಮವಾಗಿ ಮೊದಲ ಮತ್ತು 2ನೇ ಸ್ಥಾನವನ್ನು ಪಡೆದಿರುವ ಸ್ಮಿತ್ ಮತ್ತು ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಸರಾಸರಿ 50ಕ್ಕಿಂತ ಹೆಚ್ಚು ರನ್ಗಳಿಸಿದ್ದಾರೆ. ಈಟಿವಿ ಭಾರತ ಜೊತೆ ವಿಶೇಷ ಸಂದರ್ಶನದಲ್ಲಿ ಭಾಗವಹಿಸಿದ್ದ ಪನೇಸರ್, ತಮ್ಮ ಸಾರ್ವಕಾಲಿಕ ಟೆಸ್ಟ್, ಟಿ-20ಮತ್ತು ಏಕದಿನ ಇಲೆವೆನ್ ತಂಡವನ್ನು ಬಹಿರಂಗಪಡಿಸಿದ್ದಾರೆ.
ಈಟಿವಿ ಭಾರತ ಜೊತೆ ವಿಶೇಷ ಸಂದರ್ಶನದಲ್ಲಿ ಮಾಂಟಿ ಪನೇಸರ್ ಪನೇಸರ್ ಅವರ ಸಾರ್ವಕಾಲಿಕ ಟೆಸ್ಟ್ ಇಲೆವೆನ್ :ಮ್ಯಾಥ್ಯೂ ಹೇಡನ್, ಅಲಿಸ್ಟರ್ ಕುಕ್, ರಿಕಿ ಪಾಂಟಿಂಗ್ (ನಾಯಕ), ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಆಡಮ್ ಗಿಲ್‌ಕ್ರಿಸ್ಟ್, ಶೇನ್ ವಾರ್ನ್, ಶಾನ್ ಪೊಲಾಕ್, ವಾಸಿಮ್ ಅಕ್ರಮ್, ಡ್ಯಾರೆನ್ ಗೌಪ್ ಮತ್ತು ಜೇಮ್ಸ್ ಆಂಡರ್ಸನ್.
ಸಾರ್ವಕಾಲಿಕ ಏಕದಿನ ಇಲೆವೆನ್:ಸನತ್ ಜಯಸೂರ್ಯ, ಸಯೀದ್ ಅನ್ವರ್, ಅರವಿಂದ ಡಿಸಿಲ್ವಾ, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಎಂ ಎಸ್ ಧೋನಿ (ನಾಯಕ), ಆಂಡ್ರ್ಯೂ ಫ್ಲಿಂಟಾಫ್, ಹರ್ಭಜನ್ ಸಿಂಗ್, ಮುತ್ತಯ್ಯ ಮುರಳೀಧರನ್, ಬ್ರೆಟ್ ಲೀ ಮತ್ತು ಶೋಯಬ್ ಅಖ್ತರ್.
ಸಾರ್ವಕಾಲಿಕ ಟಿ-20 ಇಲೆವೆನ್ : ಡೇವಿಡ್ ವಾರ್ನರ್, ಜೇಸನ್ ರಾಯ್, ವಿರಾಟ್ ಕೊಹ್ಲಿ (ನಾಯಕ), ಸ್ಟೀವ್ ಸ್ಮಿತ್, ಬೆನ್ ಸ್ಟೋಕ್ಸ್, ಎಂಎಸ್ ಧೋನಿ, ಆಂಡ್ರೆ ರಸ್ಸೆಲ್, ರಶೀದ್ ಖಾನ್, ಮಿಚೆಲ್ ಸ್ಟಾರ್ಕ್, ಲಸಿತ್ ಮಾಲಿಂಗ ಮತ್ತು ಜೋಫ್ರಾ ಆರ್ಚರ್.