ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್​ ನಾಯಕ ಮಾರ್ಗನ್​ಗೆ ಈ ಬಾರಿ ದೊಡ್ಡ​ ಮೊತ್ತ: ಮಾಂಟಿ ಪನೇಸರ್​ ಭವಿಷ್ಯ - ಇಂಗ್ಲೆಂಡ್​ ನಾಯಕ ಮಾರ್ಗನ್​ಗೆ ದೊಡ್ಡ​ ಮೊತ್ತ

ಕೋಲ್ಕತ್ತಾದಲ್ಲಿ ನಡೆಯುತ್ತಿರುವ 2020ರ ಆವೃತ್ತಿಯ ಐಪಿಎಲ್ ​ಹರಾಜು ಪ್ರಕ್ರಿಯೆಯಲ್ಲಿ ಇಂಗ್ಲೆಂಡ್ ತಂಡದ ಹಲವು ಆಟಗಾರರ ಹೆಸರು ಸೇರಿವೆ. ಇಂಗ್ಲೆಂಡ್​ ತಂಡದ ಸೀಮಿತ ಓವರ್​ಗಳ ನಾಯಕ ಇಯಾನ್ ಮಾರ್ಗನ್​ ಉತ್ತಮ ಮೊತ್ತ ಪಡೆಯಲಿದ್ದಾರೆ ಎಂದು ಮಾಂಟಿ ಪನೇಸರ್ ಅಭಿಪ್ರಾಯಪಟ್ಟಿದ್ದಾರೆ.​

IPL auction
IPL auction

By

Published : Dec 19, 2019, 4:02 PM IST

ಹೈದರಾಬಾದ್​:ಇಂಗ್ಲೆಂಡ್​ ತಂಡದ ನಾಯಕ ಇಯಾನ್​ ಮಾರ್ಗನ್​ ಈ ಬಾರಿಯ ಐಪಿಎಲ್​ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಸೇಲ್‌ ಆಗಲಿದ್ದಾರೆ ಎಂದು ಇಂಗ್ಲೆಂಡ್​ ಮಾಜಿ ಆಟಗಾರ ಮಾಂಟಿ ಪನೇಸರ್ ಅಭಿಪ್ರಾಯಪಟ್ಟಿದ್ದಾರೆ.

ಇಂದು ಕೋಲ್ಕತ್ತಾದಲ್ಲಿ ನಡೆಯುತ್ತಿರುವ 2020ರ ಆವೃತ್ತಿಯ ಐಪಿಎಲ್ ​ಹರಾಜು ಪ್ರಕ್ರಿಯೆಯಲ್ಲಿ ಇಂಗ್ಲೆಂಡ್ ತಂಡದ ಹಲವು ಆಟಗಾರರ ಹೆಸರು ಸೇರಿದ್ದು, ಅದರಲ್ಲಿ ಇಂಗ್ಲೆಂಡ್​ ತಂಡ ಸೀಮಿತ ಓವರ್​ಗಳ ನಾಯಕ ಮಾರ್ಗನ್​ ಉತ್ತಮ ಮೊತ್ತ ಪಡೆಯಲಿದ್ದಾರೆ ಎಂದು ಮಾಂಟಿ ಪನೇಸರ್ ಹೇಳಿದ್ದಾರೆ.​

ಐಪಿಎಲ್​ ಹರಾಜು ವಿಚಾರ

ಈಟಿವಿ ಭಾರತ ಸ್ಪೋರ್ಟ್ಸ್‌ ಡೆಸ್ಕ್‌​ ಜೊತೆ ಮಾತನಾಡಿರುವ ಅವರು, ಮಾರ್ಗನ್​ ಸೀಮಿತ ಓವರ್​ಗಳಲ್ಲಿ ಉತ್ತಮ ಫಾರ್ಮ್​ನಲ್ಲಿದ್ದಾರೆ. ಜೊತೆಗೆ ಅವರೊಬ್ಬ ಉತ್ತಮ ನಾಯಕನೂ ಆಗಿರುವುದರಿಂದ ಅವರನ್ನು ಫ್ರಾಂಚೈಸಿಗಳ ನೆಚ್ಚಿನ ಆಟಗಾರರಲ್ಲಿ ಒಬ್ಬರು ಎಂದಿದ್ದಾರೆ.

ಮಾರ್ಗನ್​ ಜೊತೆಗೆ ಸ್ಯಾಮ್​ ಕರ್ರನ್​ ಅವರೂ ಕೂಡ ಐಪಿಎಲ್​ ತಂಡಗಳ ನೆಚ್ಚಿನ ಆಟಗಾರನಾಗಲಿದ್ದಾರೆ. ಅವರ ಮೇಲೆ ಹೆಚ್ಚು ಬಿಡ್​ ಆಗುವ ಸಾಧ್ಯತೆಯಿದೆ ಎಂದು ಪನೇಸರ್ ಭವಿಷ್ಯ ನುಡಿದರು.

ಐಪಿಎಲ್​ನ 8 ಫ್ರಾಂಚೈಸಿಗಳಿಂದ 71 ಆಟಗಾರರನ್ನು ಕೈಬಿಟ್ಟಿವೆ. ಇವರೂ ಸೇರಿದಂತೆ 971 ಆಟಗಾರರು ಈ ಬಾರಿ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಇದೀಗ 338 ಆಟಗಾರರ ಶಾರ್ಟ್​ಲಿಸ್ಟ್​ ತಯಾರಾಗಿದ್ದು ಅದರಲ್ಲಿ 73 ಆಟಗಾರರನ್ನು ಮಾತ್ರ ತಂಡದ ಮಾಲೀಕರು ಖರೀದಿಸಲು ಅವಕಾಶವಿದೆ.

ABOUT THE AUTHOR

...view details