ಕರ್ನಾಟಕ

karnataka

ETV Bharat / sports

ಎಕ್ಸ್​ಕ್ಲೂಸಿವ್​: WBBL ಮತ್ತು WIPL​ ನಡುವಿನ ಘರ್ಷಣೆ ಆದರ್ಶವಲ್ಲ ಎಂದ ಇಂಗ್ಲೆಂಡ್ ಮಾಜಿ ಕೋಚ್ ರಾಬಿನ್​ಸನ್ - ಮಹಿಳೆಯರ ಐಪಿಎಲ್ ಮತ್ತು ಮಹಿಳೆಯರ ಬಿಬಿಎಲ್

ಕೋವಿಡ್ 19 ಮಹಿಳೆಯರ ಕ್ರಿಕೆಟ್​ಗಾಗಿ ಮಾಡಿದ ಎಲ್ಲಾ ಉತ್ತಮ ಕಾರ್ಯಗಳನ್ನು ಹಳಿ ತಪ್ಪಿಸುವ ಬೆದರಿಕೆಯಾಕುತ್ತಿದೆ. ಇದು ಮಹಿಳೆಯರ ಕ್ರಿಕೆಟ್​ನ ಬೆಳವಣಿಗೆಯನ್ನು ಹಾಸಿಗೊಳಿಸುವ ಮೂಲಕ ಎರಡು ವರ್ಷಗಳ ಹಿಂದಕ್ಕೆ ಕೊಂಡೊಯ್ದಿದೆ ಎಂದು ಹೇಳಿದ್ದಾರೆ.

By

Published : Oct 28, 2020, 5:09 PM IST

ಹೈದರಾಬಾದ್​:2020 ಮಹಿಳೆಯ ಕ್ರೀಡೆಗಳ ವರ್ಷ ಎಂದು ಭಾವಿಸಲಾಗಿತ್ತು. ಆದರೆ ನಂತರ ಕೋವಿಡ್ 19 ಸಾಂಕ್ರಾಮಿಕ ಸಂಭವಿಸಿದ ಕಾರಣ ವಿಶ್ವಕಪ್ ಫೈನಲ್​ ಪಂದ್ಯದಲ್ಲಿ ದಾಖಲೆ ವೀಕ್ಷಕರ ಮುಂದೆ ಆಡಿದ ಭಾರತದ ಮಹಿಳಾ ಕ್ರಿಕೆಟಿಗರು ಮತ್ತೆ 8 ತಂಗಳ ನಂತರ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳುತ್ತಿದ್ದಾರೆ.

ಕೋವಿಡ್ 19 ಮಹಿಳೆಯರ ಕ್ರಿಕೆಟ್​ಗಾಗಿ ಮಾಡಿದ ಎಲ್ಲಾ ಉತ್ತಮ ಕಾರ್ಯಗಳನ್ನು ಹಳಿ ತಪ್ಪಿಸುವ ಬೆದರಿಕೆಯಾಕುತ್ತಿದೆ. ಇದು ಮಹಿಳೆಯರ ಕ್ರಿಕೆಟ್​ನ ಬೆಳವಣಿಗೆಯನ್ನು ಹಾಸಿಗೊಳಿಸುವ ಮೂಲಕ ಎರಡು ವರ್ಷಗಳ ಹಿಂದಕ್ಕೆ ಕೊಂಡೊಯ್ದಿದೆ ಎಂದು ಹೇಳಿದ್ದಾರೆ.

ರಾಬಿನ್​ಸನ್​ ಸಂದರ್ಶನ

ಪುರುಷರ ಕ್ರಿಕೆಟ್​ಅನ್ನು ಮತ್ತೆ ಟ್ರ್ಯಾಕ್​ ತರುವುದಕ್ಕೆ ಹೆಚ್ಚಿನ ಕ್ರಿಕೆಟ್​ ಸಂಸ್ಥೆಗಳು ಕಾಳಜಿ ವಹಿಸಿವೆ. ಆದರೆ ಹೆಚ್ಚು ಮಹಿಳಾ ಕ್ರಿಕೆಟ್​ ಇಲ್ಲದಿರುವ ಸಂದರ್ಭದಲ್ಲಿ ಭಾರತದ ಮಹಿಳಾ ಟಿ20 ಚಾಲೆಂಜ್ ಮತ್ತು ಆಸ್ಟ್ರೇಲಿಯಾದ ಮಹಿಳಾ ಬಿಗ್​ಬ್ಯಾಶ್​ ಲೀಗ್ ನಡುವೆ ವೇಳಾಪಟ್ಟಿ ಘರ್ಷಣೆ ಉಂಟುಮಾಡಿದ್ದು, ಮಹಿಳೆಯರ ಆಟವನ್ನು ಕುಂಠಿತಗೊಳಿಸಿದೆ.

ಈ ವಿಚಾರವಾಗಿ ಈಟಿವಿ ಭಾರತದ ಎಕ್ಸ್​ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿರುವ ಇಂಗ್ಲೆಂಡ್ ಮಹಿಳಾ ತಂಡದ ಕೋಚ್ ಮಾರ್ಕ್ ರಾಬಿನ್​ಸನ್​, WIPLಮತ್ತು WBBL ನಡುವಿನ ಸಂಘರ್ಷ ಆಟಕ್ಕೆ ಸೂಕ್ತವಲ್ಲ ಹಾಗೂ ಇದು ಸರಿಯಾದ ಸಮಯವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆದಾಗ್ಯೂ, ಮಹಿಳಾ ಟಿ 20 ಚಾಲೆಂಜರ್ಸ್ ದಿನಾಂಕಗಳನ್ನು ನಿರ್ಧರಿಸುವ ಮೊದಲುಬಿಸಿಸಿಐ ಶಾರ್ಜಾದಲ್ಲಿ ಎಲ್ಲಾ ವ್ಯವಸ್ಥೆಗಳು ಮತ್ತು ಮೂಲಸೌಕರ್ಯಗಳ ಬಗ್ಗೆ ಯೋಚಿಸಬೇಕೆಂದು ರಾಬಿನ್​ಸನ್ ಒತ್ತಿ ಹೇಳಿದ್ದಾರೆ.

2017ರಲ್ಲಿ ಇಂಗ್ಲೆಂಡ್ ಮಹಿಳಾ ತಂಡ ವಿಶ್ವಕಪ್​ ಗೆಲ್ಲುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದ ಕೋಚ್ ರಾಬಿನ್ಸನ್, ಮಹಿಳಾ ಐಪಿಎಲ್​ಅನ್ನು ಪುರುಷರ ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿದ ನಂತರ ಮಹಿಳಾ ಐಪಿಎಲ್​ ಲೀಗ್​ನಲ್ಲಿ ಆಯೋಜಿಸುವುದು ಸರಣ ಮತ್ತು ಸುಲಭವಾದ ಮಾರ್ಗ ಎಂದು ಸಲಹೆ ನೀಡಿದ್ದಾರೆ.

ಎರಡು ಮಹಿಳಾ ಲೀಗ್​ಗಳ ನಡುವಿನ ಸಂಘರ್ಷಕ್ಕೆ ಇದು ಸಮಯವಲ್ಲ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಟೂರ್ನಿ ನಡೆಯುತ್ತಿವೆ. ಹಾಗಾಗಿ ಯಾರು ಬಿಗ್​ಬ್ಯಾಶ್​ನಲ್ಲಿ ಆಡುವ ಅವಕಾಶವಿಲ್ಲವೋ ಅಂತಹ ಆಟಗಾರ್ತಿಯರಿಗೆ ಮಹಿಳೆಯರ ಐಪಿಎಲ್ ಒಂದು ಒಳ್ಳೆಯ ಅವಕಾಶವಾಗಿದೆ ಎಂದಿರುವ ರಾಬಿನ್​ಸನ್ ಆಸ್ಟ್ರೇಲಿಯಾ ಆಟಗಾರ್ತಿಯರು ಈ ಲೀಗ್​ನಲ್ಲಿ ಆಡದಿರುವುದು ಮತ್ತು ಭಾರತದ ಪ್ರಮುಖ ಆಟಗಾರ್ತಿಯರು ಬಿಗ್​ಬ್ಯಾಶ್​ನಲ್ಲಿ ಪಾಲ್ಗೊಳ್ಳದಿರುವುದು ಅವಮಾನಕರ ಸಂಗತಿ ಎಂದಿದ್ದಾರೆ.

ABOUT THE AUTHOR

...view details