ಮುಂಬೈ:ಆಸ್ಟ್ರೇಲಿಯಾ ವಿರುದ್ಧದ 2ನೇ ಪಂದ್ಯದಲ್ಲಿ ಕೆ ಎಲ್ ರಾಹುಲ್ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ನಲ್ಲೂ ಮಿಂಚಿದ್ದರು. ಆದರೆ, ಇದೇ ಜವಾಬ್ದಾರಿಯನ್ನು ದೀರ್ಘಾವಧಿಗೆ ಮುಂದುವರಿಸುವುದು ಬೇಡ ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗರು ಅಭಿಪ್ರಾಯ ಪಟ್ಟಿದ್ದಾರೆ.
ಭಾರತ ತಂಡದ ಪರ ಆಡಿರುವ ಆಕಾಶ್ ಚೊಪ್ರಾ ಹಾಗೂ ಮಾಜಿ ವಿಕೆಟ್ ಕೀಪರ್ ನಯನ್ ಮೊಂಗಿಯಾ ಕೆ ಎಲ್ ರಾಹುಲ್ ದೀರ್ಘಾವಧಿಯ ವಿಕೆಟ್ ಕೀಪರ್ ಆದರೆ ಅದು ಅವರ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಹುಲ್ ಈ ಹಿಂದೆ ಅರೆಕಾಲಿಕ ವಿಕೆಟ್ ಕೀಪರ್ ಆಗಿದ್ದ ದ್ರಾವಿಡ್ಗಿಂತಲೂ ಉತ್ತಮ ವಿಕೆಟ್ ಕೀಪರ್. ಆದರೆ, ರಾಹುಲ್ ಕೀಪಿಂಗ್ ಹಾಗೂ ಬ್ಯಾಟಿಂಗ್ ಎರಡೂ ಜವಾಬ್ದಾರಿಗಳನ್ನು ನಿರ್ವಹಿಸಬಾರದು. ಅವರು 50 ಓವರ್ಗಳ ತನಕ ಕೀಪಿಂಗ್ ಮಾಡಿ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ಆಸಾಧ್ಯ. ರಾಹುಲ್ ನನ್ನ ಪ್ರಕಾರ ಅತ್ಯುತ್ತಮ ವಿಕೆಟ್ ಕೀಪರ್ ಬ್ಯಾಟ್ಸ್ಮನ್. ಆದರೆ, ಎರಡೂ ಜವಾಬ್ದಾರಿ ನಿರ್ವಹಿಸಿದರೆ ಅವರಿಗೆ ಕೆಲಸದ ಒತ್ತಡ ಹೆಚ್ಚಾಗುತ್ತದೆ ಎನ್ನುವುದೇ ನನ್ನ ಅನಿಸಿಕೆ. ಹಾಗಾಗಿ ರಾಹುಲ್ ತಂಡದ 2ನೇ ವಿಕೆಟ್ ಕೀಪರ್ ಆಗಿರುವುದೇ ಉತ್ತಮ ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.