ವೆಲ್ಲಿಂಗ್ಟನ್:ಇತ್ತೀಚೆಗೆ ಕಿವೀಸ್ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ವಿಕೆಟ್ ಪಡೆಯದೇ 30 ಓವರ್ಗಳನ್ನೆಸೆದ ಬುಮ್ರಾ ಬೌಲಿಂಗ್ ಬಗ್ಗೆ ಟೀಕೆಗಳು ಕೇಳಿಬರುತ್ತಿದ್ದು, ಕಿವೀಸ್ ಬೌಲಿಂಗ್ ಲೆಜೆಂಡ್ ಶೇನ್ ಬಾಂಡ್ ಬುಮ್ರಾ ಕುರಿತು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಪ್ರಸ್ತುತ ಕ್ರಿಕೆಟ್ನಲ್ಲಿ ವಿಶ್ವದ ಅತ್ಯುತ್ತಮ ವೇಗದ ಬೌಲರ್ ಆಗಿರುವ ಬುಮ್ರಾ ಕಿವೀಸ್ ವಿರುದ್ಧ ಅನಿರೀಕ್ಷಿತವಾಗಿ ವಿಕೆಟ್ ಪಡೆಯುವುದರಲ್ಲಿ ವಿಫಲರಾಗಿದ್ದು, ಕ್ರಿಕೆಟ್ ಜಗತ್ತಿಗೆ ಒಂದು ದೊಡ್ಡ ಅಚ್ಚರಿಯಾಗಿತ್ತು. ಆದರೆ ಬುಮ್ರಾರ ಬೌಲಿಂಗ್ ಬಗೆಗಿನ ಟೀಕೆಗಳನ್ನ ಶೇನ್ ಬಾಂಡ್ ಅಲ್ಲಗಳೆದಿದ್ದಾರೆ.
"ಜಸ್ಪ್ರೀತ್ ಬುಮ್ರಾರಂತಹ ಕ್ವಾಲಿಟಿ ಬೌಲರ್ಗಳನ್ನ ನೀವು ಆರಿಸಿಕೊಂಡರೆ ಅವರಿಂದ ಅತ್ಯುತ್ತಮವಾದದನ್ನು ನಿರೀಕ್ಷೆ ಮಾಡುವುದು ಸಾಮಾನ್ಯ ಸಂಗತಿಯಾಗಿರುತ್ತದೆ" ಎಂದು ಬಾಂಡ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಜಸ್ಪ್ರೀತ್ ಬುಮ್ರಾ -ಮುಂಬೈ ಕೋಚ್ ಶೇನ್ ಬಾಂಡ್ "ನ್ಯೂಜಿಲ್ಯಾಂಡ್ ಬ್ಯಾಟ್ಸ್ಮನ್ಗಳು ಬುಮ್ರಾ ಬೌಲಿಂಗ್ಗೆ ಉತ್ತಮವಾಗಿ ಆಡಿದರು ಎಂದು ನಾನು ಭಾವಿಸಿದ್ದೇನೆ. ಆದರೆ ಆತನನ್ನು ಅಪಾಯಕಾರಿ ಬೌಲರ್ ಎಂದು ಅವರು ಗುರುತಿಸಿಕೊಂಡಿದ್ದರು ಎನ್ನುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಬುಮ್ರಾ ವಿರುದ್ಧ ಸಾಂಪ್ರಾದಾಯಬದ್ಧವಾಗಿ ಆಡಿ, ಅನನುಭವಿಗಳಾದ ಕೆಲವು ಬೌಲರ್ಗಳನ್ನ(ಸೈನಿ, ಟಾಕೂರ್) ಟಾರ್ಗೆಟ್ ಮಾಡಿಕೊಂಡರು" ಎಂದು ಅವರು ಉಲ್ಲೇಖಿಸಿದ್ದಾರೆ.
"ವಿಶ್ವದ ಎಲ್ಲಾ ತಂಡಗಳು ಪ್ರಸ್ತುತ ಬುಮ್ರಾರನ್ನು ಅಪಾಯಕಾರಿ ಎಂದು ತಿಳಿದಿದ್ದಾರೆ. ಆದ್ದರಿಂದಲೇ ಇತರೆ ಬೌಲರ್ಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೌಲರ್ಗಳು ಹೆಚ್ಚಿನ ರನ್ ಬಿಟ್ಟು ಕೊಡುತ್ತಾರೆ. ಅಲ್ಲದೆ ಫ್ಲಾಟ್ ಪಿಚ್ಗಳಲ್ಲಿ ಬೌಲಿಂಗ್ ಮಾಡುವುದು ಕೂಡ ಅಷ್ಟು ಸುಲಭದ ಮಾತಲ್ಲ" ಎಂದು ಬಾಂಡ್ ಹೇಳಿದ್ದಾರೆ.
ಇನ್ನು ಭಾರತ 3-0 ಅಂತರದಲ್ಲಿ ಸರಣಿ ಕಳೆದುಕೊಂಡರೂ ಬುಮ್ರಾ ಬೌಲಿಂಗ್ ಕೆಟ್ಟದಾಗಿರಲಿಲ್ಲ ಎಂದಿರುವ ಅವರು, ಬುಮ್ರಾ ಸಮಾಧಾನಕರ ಬೌಲಿಂಗ್ ಪ್ರದರ್ಶನ ನೀಡಿದ್ದರು. ಒಮ್ಮೊಮ್ಮೆ ಉತ್ತಮ ಬೌಲರ್ಗಳು ಕೂಡ ವಿಕೆಟ್ ಪಡೆಯುವಲ್ಲಿ ವಿಫಲರಾಗುತ್ತಾರೆ ಎಂದು ಬಾಂಡ್, ಬುಮ್ರಾ ಬೌಲಿಂಗ್ ದೊಡ್ಡ ವೈಫಲ್ಯವಲ್ಲ ಎಂದಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಶೇನ್ ಬಾಂಡ್, ಬುಮ್ರಾ ಜೊತೆ ಐಪಿಎಲ್ ವೇಳೆ ತುಂಬಾ ಸಮಯ ಕಳೆದಿದ್ದಾರೆ. ಹಾಗಾಗಿ ಬುಮ್ರಾರ ಬೌಲಿಂಗ್ ಶಕ್ತಿ ಏನೆಂಬುದು ಅವರಿಗೆ ತಿಳಿದಿದೆ. ಇನ್ನು ಟೆಸ್ಟ್ ಸರಣಿಯಲ್ಲಿ ಬುಮ್ರಾ ಅತ್ಯುತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ಬಾಂಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಏಕದಿನ ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಬೌಲಿಂಗ್