ಕರ್ನಾಟಕ

karnataka

By

Published : Feb 8, 2021, 10:25 PM IST

ETV Bharat / sports

ನನ್ನ ದೇಹ ಸ್ಪಂದಿಸದಿದ್ದರೂ, ಕಲೆಯ ಮೇಲಿನ ಪ್ರೀತಿ ನನ್ನಿಂದ ಬೌಲಿಂಗ್ ಮಾಡಿಸುತ್ತದೆ : ಅಶ್ವಿನ್

ನನ್ನ ಮಟ್ಟಿಗೆ ಕ್ರಿಕೆಟ್​ ದಿನಗಳಲ್ಲಿ 40 ರಿಂದ 45 ಓವರ್​ ಬೌಲಿಂಗ್ ಮಾಡಿ ಮತ್ತೆ ನೆಟ್ಸ್​ಗೆ ಹಿಂತಿರುಗುವುದು ಜೀವನದ ಒಂದು ಭಾಗ. ಬೌಲಿಂಗ್ ವಿಷಯಕ್ಕೆ ಬಂದರೆ ನನ್ನ ದೇಹದ ಕೆಲವು ಭಾಗಗಳು ಸರಿಯಾಗಿ ಸ್ಪಂದಿಸದಿದ್ದಾಗಲೂ ಬೌಲಿಂಗ್ ಮಾಡಲು ಮುಂದುವರಿಯುತ್ತೇನೆ ಮತ್ತು ನಾನು ಆನಂದಿಸುತ್ತೇನೆ..

ರವಿಚಂದ್ರನ್ ಅಶ್ವಿನ್
ರವಿಚಂದ್ರನ್ ಅಶ್ವಿನ್

​ಚೆನ್ನೈ: ಮೈದಾನದಲ್ಲಿ ಸುಮಾರು 73 ಓವರ್​ಗಳಿಗೆ ತೋಳನ್ನು ತಿರುಗಿಸಿ ಬೌಲಿಂಗ್ ಮಾಡುವುದು ಸಾಧಾರಣ ಸಾಧನೆಯಲ್ಲ. ಆದರೆ, ರವಿಚಂದ್ರನ್ ಅಶ್ವಿನ್​ ಅವರ ಬೌಲಿಂಗ್ ಕಲೆಯ ಮೇಲಿನ ಶಾಶ್ವತ ಪ್ರೀತಿ ದೈಹಿಕ ಮಿತಿ ಮೀರಿ ತಮಗೆ ನೆರವಾಗಿದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಇಂಗ್ಲೆಂಡ್ ವಿರುದ್ಧ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಅಶ್ವಿನ್ 2 ಪಂದ್ಯಗಳನ್ನು ಸೇರಿದಂತೆ 9 ವಿಕೆಟ್ ಪಡೆದಿದ್ದಾರೆ. ಅಲ್ಲದೆ ಈ ಪಂದ್ಯದಲ್ಲಿ ತಮ್ಮ 28ನೇ ಬಾರಿಗೆ 5 ವಿಕೆಟ್​ ಪಡೆದ ಸಾಧನೆ ಮಾಡಿದ್ದಾರೆ. ಒಂದು ದಿನದಲ್ಲಿ 40 ಓವರ್‌ಗಳನ್ನು ಬೌಲಿಂಗ್ ಮಾಡುವುದು ತಮಗೆ ಸಂತೋಷದಾಯಕ ವ್ಯಾಯಾಮವಿದ್ದಂಯೇ ಎಂದು ಭಾರತದ ಅಗ್ರ ಸ್ಪಿನ್ನರ್ ಅಶ್ವಿನ್ ಹೇಳಿದ್ದಾರೆ.

"ನನ್ನ ಮಟ್ಟಿಗೆ ಕ್ರಿಕೆಟ್​ ದಿನಗಳಲ್ಲಿ 40 ರಿಂದ 45 ಓವರ್​ ಬೌಲಿಂಗ್ ಮಾಡಿ ಮತ್ತೆ ನೆಟ್ಸ್​ಗೆ ಹಿಂತಿರುಗುವುದು ಜೀವನದ ಒಂದು ಭಾಗ. ಬೌಲಿಂಗ್ ವಿಷಯಕ್ಕೆ ಬಂದರೆ ನನ್ನ ದೇಹದ ಕೆಲವು ಭಾಗಗಳು ಸರಿಯಾಗಿ ಸ್ಪಂದಿಸದಿದ್ದಾಗಲೂ ಬೌಲಿಂಗ್ ಮಾಡಲು ಮುಂದುವರಿಯುತ್ತೇನೆ ಮತ್ತು ನಾನು ಆನಂದಿಸುತ್ತೇನೆ.

ಯಾಕೆಂದರೆ, ನಾನು ನನ್ನ ಕಲೆಯನ್ನು ಅಷ್ಟು ಪ್ರೀತಿಸುತ್ತೇನೆ ಎಂದು ಅವರು ಅಶ್ವಿನ್ ತಿಳಿಸಿದ್ದಾರೆ. ಎರಡನೇ ಇನ್ನಿಂಗ್ಸ್​ನಲ್ಲಿ ಅಶ್ವಿನ್​ 61 ರನ್​ ನೀಡಿ 6 ವಿಕೆಟ್ ಪಡೆದು ಇಂಗ್ಲೆಂಡ್ ತಂಡ 178ಕ್ಕೆ ಆಲೌಟ್ ಆಗಲು ನೆರವಾಗಿದ್ದರು.

ಇದನ್ನು ಓದಿ:ಟೆಸ್ಟ್​ ಕ್ರಿಕೆಟ್​ನಲ್ಲಿ ಹೆಚ್ಚು 5 ವಿಕೆಟ್​: ಇಯಾನ್ ಬಾಥಮ್​ ದಾಖಲೆ ಬ್ರೇಕ್​ ಮಾಡಿದ ಆರ್​.ಅಶ್ವಿನ್

ABOUT THE AUTHOR

...view details