ಕರ್ನಾಟಕ

karnataka

ETV Bharat / sports

ಅರೆ,ಇದೆಂಥಾ ಬೌಲಿಂಗ್‌! ವಿಚಿತ್ರ ಶೈಲಿಯಿಂದ ಗಮನ ಸೆಳೆದ ಬೌಲರ್‌! ವಿಡಿಯೋ - ವಿಚಿತ್ರವಾಗಿ ಬೌಲಿಂಗ್

ಯುರೋಪಿಯನ್​ ಕ್ರಿಕೆಟ್ ಲೀಗ್​​​​ನಲ್ಲಿ ಬೌಲರ್ ವಿಚಿತ್ರವಾಗಿ ಬೌಲಿಂಗ್​ ಮಾಡಿ ನಗೆಪಾಟಲಿಗೀಡಾದ ಪ್ರಸಂಗ ನಡೆದಿದೆ.

ಯುರೋಪಿಯನ್ ಕ್ರಿಕೆಟ್ ಲೀಗ್

By

Published : Jul 30, 2019, 7:53 PM IST

ಕೊಲಂಬಿಯಾ: ಯುರೋಪಿಯನ್​ ಕ್ರಿಕೆಟ್​ ಲೀಗ್​​ನಲ್ಲಿ ಬೌಲರ್ ವಿಚಿತ್ರವಾಗಿ ಬೌಲಿಂಗ್​ ಮಾಡುವ ಮೂಲಕ ಗಮನ ಸೆಳೆದಿದ್ದಾನೆ. ಈತನ ಬೌಲಿಂಗ್‌ ಶೈಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಕಾಮೆಂಟ್ಸ್‌ ಬರುತ್ತಿದೆ.

ಯುರೋಪಿಯನ್​​​ ಟಿ-10 ಕ್ರಿಕೆಟ್​ ಲೀಗ್​​ನಲ್ಲಿ ಪಾವೆಲ್​ ಪ್ಲೊರಿನ್ ಎಂಬ ಬೌಲರ್‌​​ ಈ ರೀತಿ ಬೌಲ್‌ ಮಾಡಿದ್ದಾರೆ. ಕ್ಲೂಜ್ ಕ್ರಿಕೆಟ್ ಕ್ಲಬ್ ತಂಡದ ಪರ ಆಡಿದ ಪಾವೆಲ್​​ ವಿಚಿತ್ರವಾಗಿ ಚೆಂಡು ಎಸೆದಿದ್ದಾರೆ. ಡ್ರೂಕ್ಸ್​ ಕ್ರಿಕೆಟ್​ ಕ್ಲಬ್​ ತಂಡದ ಬ್ಯಾಟ್ಸ್​​ಮನ್​ ಈ ವೇಳೆ ಪೇಚಿಗೆ ಸಿಲುಕಿದ್ದು, ಎಸೆತಗಳನ್ನು ಎದುರಿಸಲಾಗದೆ ಪರದಾಟ ಅನುಭವಿಸಿದ್ರು. ವಿಶೇಷ ಅಂದ್ರೆ, ನಿಧಾನಗತಿಯ ವಿಶೇಷ ಬೌಲಿಂಗ್ ನಲ್ಲಿ ಒಂದೇ ಒಂದು ಬೌಂಡರಿ ಅಥವಾ ಸಿಕ್ಸರ್‌​​​​ ಸಹ ಸಿಡಿಯಲಿಲ್ಲ.

ಯುರೋಪಿಯನ್ ಕ್ರಿಕೆಟ್‌ ಲೀಗ್‌ ಬಗ್ಗೆ ಒಂದಿಷ್ಟು:

ಯುರೋಪಿಯನ್​​​ ಟಿ-10 ಕ್ರಿಕೆಟ್​ ಲೀಗ್ 8 ತಂಡಗಳನ್ನೊಳಗೊಂಡು ನಡೆಯುತ್ತಿರುವ ಟೂರ್ನಿ ಆಗಿದ್ದು, ಕ್ಲೂಜ್ ಕ್ರಿಕೆಟ್ ಕ್ಲಬ್ ಈಗಾಗಲೇ ತಾನಾಡಿರುವ ಎರಡು ಪಂದ್ಯಗಳಲ್ಲಿ ಸೋಲು ಕಂಡು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ABOUT THE AUTHOR

...view details