ಹೈದರಾಬಾದ್: ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಈಗಾಗಲೇ ಮೂರು ಮಾದರಿ ಕ್ರಿಕೆಟ್ಗೂ ತಂಡಗಳನ್ನು ಬಿಸಿಸಿಐ ಪ್ರಕಟಿಸಿದೆ. ಎಂಎಸ್ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಆಯ್ಕೆ ಮಾಡಿರುವ 15 ಸದಸ್ಯರ ಟಿ20 ತಂಡದಲ್ಲಿ ರಾಜಸ್ಥಾನದ ಮೂವರು ಯುವ ಕ್ರಿಕೆಟಿಗರಿಗೆ ಮಣೆ ಹಾಕಿದೆ. ವೇಗಿ ಖಲೀಲ್ ಅಹ್ಮದ್ ಮತ್ತು ಚಹಾರ್ ಬ್ರದರ್ಸ್ ಚಾನ್ಸ್ ಪಡೆದುಕೊಂಡಿದ್ದಾರೆ.
ಸಹೋದರರಾದ ದೀಪಕ್ (ವೇಗಿ) ಮತ್ತು ರಾಹುಲ್ ಚಾಹರ್ (ಸ್ಪಿನ್ನರ್) ಒಟ್ಟಿಗೆ ಆಯ್ಕೆಗೊಂಡು ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ, ಅಮರನಾಥ, ಪಠಾಣ್ ಹಾಗೂ ಪಾಂಡ್ಯ ಬ್ರದರ್ಸ್ ನಂತರ ಚಹಾರ್ ಬ್ರದರ್ಸ್ ಟೀಮ್ ಇಂಡಿಯಾ ಪರ ಒಂದೆ ಪಂದ್ಯದಲ್ಲಿ ಆಡಲಿದ್ದಾರೆ. ಈ ಕುರಿತು ಬಹುದಿನಗಳ ಆಸೆ ಈಡೇರಿದೆ ಎಂದು ದೀಪಕ್ ಮತ್ತು ರಾಹುಲ್ ಚಹಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ಮೂವರು ವೆಸ್ಟ್ ಇಂಡೀಸ್ 'ಎ' ವಿರುದ್ಧ ನಡೆದ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಬಿಸಿಸಿಐ ಯುವ ಕ್ರಿಕೆಟಿಗರನ್ನು ಆಯ್ಕೆ ಮಾಡುವ ಮೂಲಕ ಅವರ ಭವಿಷ್ಯಕ್ಕೆ ಉತ್ತಮ ಮಾರ್ಗ ತೋರಿಸಿದೆ ಎಂದು ರಾಜಸ್ಥಾನ ಕ್ರಿಕೆಟ್ ಮಂಡಳಿ (ಆರ್ಸಿಬಿ) ತಿಳಿಸಿದೆ.
ಐಪಿಎಲ್ನಲ್ಲಿ ಖಲೀಲ್ ಅಹ್ಮದ್ ಸನ್ರೈಸರ್ಸ್ ಹೈದರಾಬಾದ್ ಪರ, ದೀಪಕ್ ಚಹಾರ್ ಚನ್ಮೈ ಸೂಪರ್ ಕಿಂಗ್ಸ್ ಪರ ಮತ್ತು ರಾಹುಲ್ ಚಹಾರ್ ಮುಂಬೈ ಇಂಡಿಯನ್ಸ್ ಪರ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ರಾಹುಲ್ ಬೌಲಿಂಗ್ ನಿರ್ವಹಣೆ ಕುರಿತು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಖಲೀಲ್ ಏಕದಿನ ಮತ್ತು ಟಿ20ಗೆ, ಚಹಾರ್ ಬ್ರದರ್ಸ್ ಟಿ20ಗೆ ಮಾತ್ರ ಸ್ಥಾನ ಪಡೆದುಕೊಂಡಿದ್ದಾರೆ.
ಆಗಸ್ಟ್ 3ರಿಂದ ಟಿ20 ಸರಣಿ ಆರಂಭವಾಗಲಿದ್ದು, ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಯಾರಿಗೆ 11ರ ಬಳಗದಲ್ಲಿ ಅವಕಾಶ ದೊರೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.