ಮುಂಬೈ: ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ವನಿತೆಯರ ನಡುವಿನ ಮೂರನೆ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವನಿತೆಯರು ಭಾರತದ ವಿರುದ್ಧ ಜಯಗಳಿಸಿದ್ದಾರೆ.
ಟಾಸ್ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತೀಯ ವನಿತೆಯರು ಉತ್ತಮ ಪ್ರದರ್ಶನ ತೋರಿದರು. ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 205 ರನ್ಗಳಿಸಿದ್ರು. ಭಾರತ ತಂಡದ ಪರ ಸ್ಮೃತಿ ಮಂಧಾನ 66, ಪುನಾಮ್ ರಾವುತ್ 56 ದೀಪ್ತಿ ಶರ್ಮಾ 27 ಮತ್ತು ಶಿಖಾ ಪಾಂಡೆ 26 ರನ್ ಗಳಿಸಿದರು.
206 ರನ್ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ವನಿತೆಯರು ವಿಕೆಟ್ ಕಳೆದುಕೊಂಡರೂ ನಿಧಾನಗತಿಯಲ್ಲಿ ರನ್ ಕಲೆಹಾಕಿದರು. ಮಧ್ಯಮ ಕ್ರಮಾಂಕದಲ್ಲಿ ಡೇನಿಯಲ್ ವ್ಯಾಟ್ ಅರ್ಧ ಶತಕ ಗಳಿಸಿ ಇಂಗ್ಲೆಂಡ್ ತಂಡಕ್ಕೆ ಆಸರೆಯಾದರು. ಅಂತಿಮವಾಗಿ 48.5 ಓವರ್ಗಳಲ್ಲಿ 208 ರನ್ ಗಳಿಸಿದ ಇಂಗ್ಲೆಂಡ್ ವನಿತೆಯರು ಗೆಲುವಿನ ನಗೆ ಬೀರಿದರು.
ಮೂರು ಏಕದಿನ ಪಂದ್ಯಗಳ ಸರಣಿಯನ್ನ ಭಾರತ ತಂಡ 2-1 ಅಂತರದಲ್ಲಿ ಕೈವಶ ಮಾಡಿಕೊಂಡಿತು. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಸ್ಮೃತಿ ಮಂಧಾನ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.