ಕರ್ನಾಟಕ

karnataka

ETV Bharat / sports

ಮೊದಲ ಬಾರಿಗೆ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಇಂಗ್ಲೆಂಡ್​ ಮಹಿಳಾ ತಂಡ ಸಜ್ಜು - ಇಂಗ್ಲೆಂಡ್ ತಂಡದಿಂದ ಪಾಕಿಸ್ತಾನ ಪ್ರವಾಸ

ಅಕ್ಟೋಬರ್​ 14 ಮತ್ತು 15ರಂದು ಪುರುಷರ ಟಿ20 ಪಂದ್ಯಗಳು ನಡೆಯುವ ದಿನವೇ ಇಂಗ್ಲೆಂಡ್ ಮತ್ತು ಪಾಕಿಸ್ತಾನ ಮಹಿಳಾ ತಂಡಗಳ ನಡುವಿನ ಚುಟುಕು ಕ್ರಿಕೆಟ್ ಪಂದ್ಯಗಳು ನಡೆಯಲಿವೆ. ಆದರೆ ಏಕದಿನ ಪಂದ್ಯಗಳು ಮಾತ್ರ ಅಕ್ಟೋಬರ್​ 18,20 ಮತ್ತು 22 ರಂದು ಕರಾಚಿ ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿವೆ ಎಂದು ಪಿಸಿಬಿ ತಿಳಿಸಿದೆ.

ಇಂಗ್ಲೆಂಡ್​ vs ಪಾಕಿಸ್ತಾನ
ಇಂಗ್ಲೆಂಡ್​ vs ಪಾಕಿಸ್ತಾನ

By

Published : Jan 7, 2021, 6:44 PM IST

ಕರಾಚಿ:ಈ ವರ್ಷದ ಅಕ್ಟೋಬರ್​ನಲ್ಲಿ ಸೀಮಿತ ಓವರ್​ಗಳ ಸರಣಿಗಾಗಿ ಪಾಕಿಸ್ತಾನ ಪ್ರವಾಸ ಕೈಗೊಳ್ಳುವ ಪುರುಷರ ಇಂಗ್ಲೆಂಡ್​ ತಂಡದ ಜೊತೆಗೆ ಮಹಿಳಾ ತಂಡ ವೈಟ್​ಬಾಲ್​ ಸರಣಿಯನ್ನಾಡಲು ಪಾಕಿಸ್ತಾನಕ್ಕೆ ಬರಲಿದೆ ಎಂದು ಪಿಸಿಬಿ ತಿಳಿಸಿದೆ.

ಮೊದಲ ಕರಾಚಿ ಪ್ರವಾಸಕ್ಕಾಗಿ ಮಹಿಳಾ ವಿಶ್ವ ಚಾಂಪಿಯನ್ ಆಗಿರುವ ಇಂಗ್ಲೆಂಡ್ ತಂಡ ತಮ್ಮ ದೇಶದ ಪುರುಷರ ತಂಡದ ಜೊತೆಗೂಡಿರುವುದು ಜಾಗತಿಕ ಕ್ರೀಡೆ ಮತ್ತು ಪಾಕಿಸ್ತಾನದ ಅತ್ಯಂತ ಶಕ್ತಿಯುತ ಘೋಷಣೆಯಾಗಿದೆ ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಾಸಿಮ್ ಖಾನ್​ ಪಿಸಿಬಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಾಸಿಮ್​ ಖಾನ್

ಈ ಪ್ರವಾಸದಲ್ಲಿ ಮಹಿಳೆಯರ ಟಿ20 ಪಂದ್ಯಗಳ ಪುರುಷರ ಪಂದ್ಯಕ್ಕಿಂತ ಮೊದಲು ಕರಾಚಿ ರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿವೆ. ನಂತರ ಪುರುಷರ ಪಂದ್ಯಗಳು ಅದೇ ದಿನ ಸಂಜೆ ನಡೆಯಲಿವೆ.

ಇಂಗ್ಲೆಂಡ್ ತಂಡ 16 ವರ್ಷಗಳ ಬಳಿಕ ಅಂದರೆ 2005ರಲ್ಲಿ ಕೊನೆಯ ಬಾರಿ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ನಂತರ ಭದ್ರತಾ ವ್ಯವಸ್ಥೆಯ ಕಾರಣ ಪಾಕ್ ಪ್ರವಾಸ ಕೈಗೊಂಡಿರಲಿಲ್ಲ. ಇದೀಗ ಟಿ20 ವಿಶ್ವಕಪ್​ಗೂ ಮುನ್ನ ಪೂರ್ವ ತಯಾರಿಯಾಗಿ ಅಕ್ಟೋಬರ್​ನಲ್ಲಿ 2 ಪಂದ್ಯಗಳ ಟಿ20 ಸರಣಿಗಾಗಿ ಪ್ರವಾಸ ಕೈಗೊಳ್ಳಲಿದೆ.

ಇದನ್ನೂ ಓದಿ: ರಾಷ್ಟ್ರಗೀತೆ ಹಾಡುವ ವೇಳೆ ಭಾವುಕರಾಗಿದ್ದಕ್ಕೆ ಕಾರಣ ತಿಳಿಸಿದ ಸಿರಾಜ್​

ABOUT THE AUTHOR

...view details