ಕರ್ನಾಟಕ

karnataka

ETV Bharat / sports

ಆಫ್ರಿಕನ್ನರಿಗೆ ತವರು ನೆಲದಲ್ಲೇ ಸೋಲುಣಿಸಿದ ಇಂಗ್ಲೆಂಡ್​​: 5 ವಿಕೆಟ್​​​​​ನಿಂದ ಮೊದಲ ಟಿ-20ಯಲ್ಲಿ ಗೆಲುವು - ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ಟಿ-20 ಸರಣಿ

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಕೊರೊನಾ ಬಳಿಕದ ಮೊದಲ ಟಿ-20 ಸರಣಿಯಲ್ಲಿ ಆತಿಥೇಯರ ವಿರುದ್ಧ ಆಂಗ್ಲರು ಭರ್ಜರಿ ಜಯ ದಾಖಲಿಸಿದ್ದಾರೆ. ಕೇಪ್​ಟೌನ್​​​​​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಜಯ ದಾಖಲಿಸಿ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

England-South Africa T20 England-South Africa T20 England-South Africa T20
ಇಂಗ್ಲೆಂಡ್-ದಕ್ಷಿಣ ಆಫ್ರಿಕಾ ಟಿ-20

By

Published : Nov 28, 2020, 7:56 AM IST

ಕೇಪ್​​ಟೌನ್​​ (ದಕ್ಷಿಣ ಆಫ್ರಿಕಾ): ಮೂವರು ಪಂದ್ಯಗಳ ಟಿ-20 ಸರಣಿಯಲ್ಲಿ ಇಂಗ್ಲೆಂಡ್ ಶುಭಾರಂಭ ಮಾಡಿದ್ದು, ತವರು ನೆಲದಲ್ಲೇ ದಕ್ಷಿಣ ಆಫ್ರಿಕಾ ತಂಡವನ್ನು 5 ವಿಕೆಟ್​​​​​​ಗಳಿಂದ ಮಣಿಸಿದೆ.

ಜಾನಿ ಬೈರ್​​​​ಸ್ಟೋಬ್ ಅವರ ಅಬ್ಬರ ಬ್ಯಾಟ್​​​ನಿಂದ ಕೇವಲ 48 ಎಸೆತದಲ್ಲಿ 86 ರನ್​ ಸಿಡಿಸಿ ಅಜೇಯರಾಗಿ ಉಳಿದರಲ್ಲದೇ ತಂಡಕ್ಕೆ ಮೊದಲ ಗೆಲುವು ತಂದುಕೊಟ್ಟರು. ಇನ್ನು 4 ಎಸೆತ ಬಾಕಿ ಇರುವಂತೆಯೇ ಆಫ್ರಿಕಾ ನೀಡಿದ್ದ 179 ರನ್​ಗಳ ಟಾರ್ಗೆಟ್​​​​​​ಗೆ ಬದಲಾಗಿ 183 ರನ್​​​ ಗಳಿಸಿ ಗೆಲುವಿನ ನಗೆ ಬೀರಿದರು.

ಬಹುತೇಕ ಪಂದ್ಯ ಕೈಚೆಲ್ಲಿದ್ದ ಇಂಗ್ಲೆಂಡ್ ಹೆನ್ರಿಕ್ಸ್​ ಎಸೆದ 17ನೇ ಓವರ್​​​ನಲ್ಲಿ ಬರೋಬ್ಬರಿ 28 ರನ್ ಗಳಿಸಿ ಪಂದ್ಯಕ್ಕೆ ತಿರುವು ಪಡೆದುಕೊಂಡಿತು. ನಾಯಕ ಮಾರ್ಗನ್ ಜೊತೆಗೂಡಿ ಬೈರ್​​​​ಸ್ಟೋವ್ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.

ಟಾಸ್​​​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಇಂಗ್ಲೆಂಡ್,​ ಆಫ್ರಿಕಾ ತಂಡವನ್ನು ಬ್ಯಾಟಿಂಗ್​​​ಗೆ ಸ್ವಾಗತಿಸಿತ್ತು. ಆರಂಭದಲ್ಲಿಯೇ ಸ್ಯಾಮ್​​ ಕರನ್,​​​​​ ಬವೂಮಾ ವಿಕೆಟ್ ಪಡೆದು ಆಫ್ರಿಕಾಗೆ ಆಘಾತ ನೀಡಿದರು.

ಬಳಿಕ ಡಿ ಕಾಕ್​​ ಹಾಗೂ ಡುಪ್ಲೆಸಿಸ್​ ಅರ್ಧ ಶತಕದ ಜೊತೆಯಾಟ ನೀಡಿ ಸ್ಕೋರ್​​​ ಬೋರ್ಡ್​​ನಲ್ಲಿ ಅಂಕ ಹೆಚ್ಚಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್​​​​​​ನಲ್ಲಿ 6 ವಿಕೆಟ್​​ ಕಳೆದುಕೊಂಡು 179ರನ್​ ಗಳಿಸಿತು.

ಬಳಿಕ ಬ್ಯಾಟಿಂಗ್​​ ಇಳಿದ ಆಂಗ್ಲರಿಗೆ ಆರಂಭಿಕರು ಉತ್ತಮ ಸ್ಟಾರ್ಟ್​ ನೀಡಲಿಲ್ಲ. ರಾಯ್​​​ ಸೊನ್ನೆ ಸುತ್ತಿದರೆ, ಬಟ್ಲರ್ 7ರನ್ ಗಳಿಸಿ ನಿರ್ಗಮಿಸಿದರು. ಬಳಿಕ ಮೈದಾನಕ್ಕಿಳಿದ ಬೈರ್​​ಸ್ಟೋವ್​ 9 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 48 ಎಸೆತದಲ್ಲಿ 86 ರನ್​ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು. ಇದೀಗ ಮೂರು ಪಂದ್ಯದ ಸರಣಿಯಲ್ಲಿ ಇಂಗ್ಲೆಂಡ್ 1-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.

ABOUT THE AUTHOR

...view details