ಪೋರ್ಟ್ ಎಲಿಜಬತ್: ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಹಾಗೂ 53 ರನ್ಗಳಿಂದ ಸೋಲುಕಾಣುವ ಮೂಲಕ ತವರಿನಲ್ಲೇ ಭಾರಿ ಮುಖಭಂಗ ಅನುಭವಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ ತಂಡ ಬೆನ್ಸ್ಟೋಕ್ಸ್(120) ಹಾಗೂ ಒಲ್ಲಿ ಪೋಪ್(135*) ಅವರ ಭರ್ಜರಿ ಶತಕದ ನೆರವಿನಿಂದ 152 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 499 ರನ್ಗಳಿಸಿ ಡಿಕ್ಲೇರ್ ಘೋಷಿಸಿಕೊಂಡಿತು.
ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ನಲ್ಲಿ, ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಇಂಗ್ಲೆಂಡ್ನ ಯುವ ಸ್ಪಿನ್ನರ್ ಡೊಮೆನಿಕ್ ಬೆಸ್(5) ಹಾಗೂ ಬ್ರಾಡ್(3) ಬೌಲಿಂಗ್ ದಾಳಿಗೆ ಸಿಲುಕಿ 209ರನ್ ಗಳಿಗೆ ಆಲ್ಔಟ್ ಆಗಿ ಪಾಲೋಆನ್ಗೆ ತುತ್ತಾಗಿತ್ತು. 63 ರನ್ಗಳಿಸಿದ ಕ್ವಿಂಟನ್ ಡಿ ಕಾಕ್ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು.