ಸೌತಾಂಪ್ಟನ್: ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದ್ದು, ಆಂಗ್ಲರು 1-0 ಅಂತರದಲ್ಲಿ ಸರಣಿ ಜಯಿಸಿದ್ದಾರೆ. ಮಳೆ ಹಿನ್ನೆಲೆ ಅಂತಿಮ ದಿನ ಹೆಚ್ಚಿನ ಸಮಯದ ಆಟ ನಡೆಯದ ಕಾರಣ ಪಾಕ್ ಎದುರಾಗಬಹುದಾದ ಸೋಲಿನಿಂದ ಬಚಾವಾಯಿತು.
ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡ 583 ರನ್ಗಳಿಸಿ ಡಿಕ್ಲೇರ್ ಘೋಷಿಸಿತ್ತು. ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ನಲ್ಲಿ 273ಕ್ಕೆ ಆಲೌಟ್ ಆದ ಪಾಕ್ ತಂಡ ಫಾಲೋಆನ್ಗೂ ಗುರಿಯಾಗಿತ್ತು. ಬಳಿಕ 310 ರನ್ ಹಿನ್ನಡೆಯೊಂದಿಗೆ ಬ್ಯಾಟಿಂಗ್ ನಡೆಸಿದ ಪಾಕ್ ನಾಲ್ಕನೇ ದಿನದಾಟದ ಅಂತ್ಯಕ್ಕೆ 100 ರನ್ಗಳಿಸಿ 2 ವಿಕೆಟ್ ಕಳೆದುಕೊಂಡಿತ್ತು. ಆದರೆ 5ನೇ ದಿನ ವರುಣ ಹಾಗೂ ಮಂದ ಬೆಳಕಿನಿಂದ ದಿನದ ಎರಡು ಸೆಸನ್ಗಳು ನಡೆಯದೆ ಕೇವಲ 27 ಓವರ್ಗಳ ಆಟ ಮಾತ್ರ ಸಾಧ್ಯವಾಯಿತು.
ಪಾಕಿಸ್ತಾನ 4 ವಿಕೆಟ್ಗೆ 187 ರನ್ ಗಳಿಸಿದ್ದಾಗ ಉಭಯ ತಂಡಗಳು ಡ್ರಾಗೆ ಸಮ್ಮತಿಸಿದವು. ಪಾಕ್ ಪರ ಬಾಬರ್ ಅಜಮ್ ಔಟಾಗದೆ 63 ರನ್ ಗಳಿಸಿದರೆ, ನಾಯಕ ಅಜರ್ ಅಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಬೌಲಿಂಗ್ನಲ್ಲಿ ಔಟ್ ಆದರು. ಇದು ಆಂಡರ್ಸನ್ ಪಡೆದ ದಾಖಲೆಯ 600ನೇ ವಿಕೆಟ್ ಆಗಿದೆ.