ಮ್ಯಾನ್ಚೆಸ್ಟರ್: ಮ್ಯಾನ್ಚೆಸ್ಟರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ನಡುವಿನ 3ನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಪಾಕಿಸ್ತಾನ 5 ರನ್ಗಳಿಂದ ರೋಚಕ ಜಯ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಪಾಕಿಸ್ತಾನ ತಂಡ, ನಾಯಕ ಬಾಬರ್ ಅಜಮ್ 21, ಫಾಖರ್ ಝಮಾನ್ 1, ಹೈದರ್ ಅಲಿ 54, ಮೊಹಮ್ಮದ್, ಶದಾಬ್ ಖಾನ್ 15 , ಹಫೀಝ್ 86 (ಅಜೇಯ) ಮತ್ತು ಇಮಾದ್ ವಾಸಿಮ್ 6 (ಅಜೇಯ) ರನ್ ಗಳಿಸುವ ಮೂಲಕ ಪಾಕ್ ತಂಡ ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 190 ರನ್ ಕಲೆ ಹಾಕಿತ್ತು.
ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಟಾಮ್ ಬ್ಯಾಂಟನ್ 46, ಜಾನಿ ಬೈರ್‌ಸ್ಟೋವ್ 0, ಡೇವಿಡ್ ಮಲನ್ 7, ನಾಯಕ ಇಯಾನ್ ಮಾರ್ಗನ್ 10, ಮೊಯೀನ್ ಅಲಿ 61, ಸ್ಯಾಮ್ ಬಿಲ್ಲಿಂಗ್ಸ್ 26, ಲೂಯಿಸ್ ಗ್ರೆಗರಿ 12, ಕ್ರಿಸ್ ಜೋರ್ಡಾನ್ 1, ಟಾಮ್ ಕರನ್ 8 (ಅಜೇಯ) ಮತ್ತು ಆದಿಲ್ ರಶೀದ್ 3 (ಅಜೇಯ) ರನ್ಗಳಿಸುವ ಮೂಲಕ ಇಂಗ್ಲೆಂಡ್ ತಂಡ 20 ಓವರ್‌ಗೆ 8 ವಿಕೆಟ್ ಕಳೆದು 185 ರನ್ ಗಳಿಸಿತು.
ಪಾಕ್ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಕ್ರಿಸ್ ಜೋರ್ಡನ್ 2 ವಿಕೆಟ್ ಪಡೆದರೆ, ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನದ ಶಾಹೀನ್ ಅಫ್ರಿದಿ ಮತ್ತು ವಹಾಬ್ ರಿಯಾಝ್ ತಲಾ 2 ವಿಕೆಟ್‌ನೊಂದಿಗೆ ಗಮನ ಸೆಳೆದರು.
ಮೊಹಮ್ಮದ್ ಹಫೀಝ್ ಸ್ಫೋಟಕ ಬ್ಯಾಟಿಂಗ್‌ನಿಂದ ಪಾಕ್ ಜಯ ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿದೆ. ಕೇವಲ ಐದು ರನ್ಗಳಿಂದ ಇಂಗ್ಲೆಂಡ್ ತಂಡ ಪಂದ್ಯದ ಜೊತೆ ಸರಣಿ ಸಹ ಕೈ ಚೆಲ್ಲಿತು.