ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್ - ಪಾಕಿಸ್ತಾನ ಟೆಸ್ಟ್​​​​​ಗೆ ಮಳೆ ಅಡ್ಡಿ: ಮೊದಲ ದಿನ ಸಾಧಾರಣ ಮೊತ್ತ ಕಲೆಹಾಕಿದ ಪಾಕ್​ - ಇಂಗ್ಲೆಂಡ್-ಪಾಕಿಸ್ತಾನ ಮೊದಲ ಟೆಸ್ಟ್​

ಟಾಸ್​ ಗೆದ್ದು ಬ್ಯಾಟಿಂಗ್​ಗೆ ಇಳಿದ ಪಾಕ್​ ಉತ್ತಮ ಅಡಿಪಾಯ ಹಾಕುವಲ್ಲಿ ಎಡವಿತು. ಒಪನರ್ ​ಆಗಿ ಕಣಕ್ಕಿಳಿದ ಮಸೂದ್ ಮತ್ತು ಅಬಿದ್ ಅಲಿ ತಂಡಕ್ಕೆ ಉತ್ತಮ ಅಡಿಪಾಯ ಹಾಕುವಲ್ಲಿ ವಿಫಲರಾದರು.

ಇಂಗ್ಲೆಂಡ್-ಪಾಕಿಸ್ತಾನ ಮೊದಲ ಟೆಸ್ಟ್​ ಗೆ ಮಳೆ ಅಡ್ಡಿ
ಇಂಗ್ಲೆಂಡ್-ಪಾಕಿಸ್ತಾನ ಮೊದಲ ಟೆಸ್ಟ್​ ಗೆ ಮಳೆ ಅಡ್ಡಿ

By

Published : Aug 6, 2020, 7:44 AM IST

ಮ್ಯಾಂಚೆಸ್ಟರ್: ಇಂಗ್ಲೆಂಡ್ - ಪಾಕಿಸ್ತಾನ ಮೊದಲ ಟೆಸ್ಟ್​ ಪಂದ್ಯದ ಮೊದಲ ದಿನದ ಆಟಕ್ಕೆ ಮಳೆರಾಯನ ಅಡ್ಡಿ ಉಂಟಾಯಿತು. ಮಳೆಯಿಂದ ಮೊದಲ ದಿನ ಕೇವಲ 49 ಓವರ್​​ಗಳಿಗೆ ಆಟವನ್ನು ಅಂತ್ಯಗೊಳಿಸಲಾಯಿತು.

ಟಾಸ್​ ಗೆದ್ದು ಬ್ಯಾಟಿಂಗ್​ಗೆ ಇಳಿದ ಪಾಕ್​ ಉತ್ತಮ ಅಡಿಪಾಯ ಹಾಕುವಲ್ಲಿ ಎಡವಿತು. ಒಪನರ್ ​ಆಗಿ ಕಣಕ್ಕಿಳಿದ ಮಸೂದ್ ಮತ್ತು ಅಬಿದ್ ಅಲಿ ತಂಡಕ್ಕೆ ಉತ್ತಮ ಅಡಿಪಾಯ ಹಾಕುವಲ್ಲಿ ವಿಫಲರಾದರು. ಅಬಿದ್​ ಅಲಿ ಕೇವಲ 6 ರನ್​​ಗಳಿಸಿದಾಗ ಜೋಫ್ರಾ ಆರ್ಚರ್ ಗೆ ವಿಕೆಟ್​ ಒಪ್ಪಿಸಿದರು. ನಂತರ ಬಂದ ನಾಯಕ ಅಜರ್​ ಅಲಿ ಶೂನ್ಯಕ್ಕೆ ಕ್ರಿಸ್​​ ವೋಕ್ಸ್​​ಗೆ ಬಲಿಯಾದರು.

ನಂತರ ಕ್ರಿಸ್​ಗಿಳಿದ ಬಾಬರ್​ ಅಜಮ್​​ ತಂಡಕ್ಕೆ ನೆರವಾದರು. ಬಾಬರ್​ ಅರ್ಧಶತಕ ಗಳಿಸಿ ಮಿಂಚಿದರು. ಬಾಬರ್​ ಅಜಮ್ (69)​ ಅರ್ಧಶತಕದ ನೆರವಿನಿಂದ ಪಾಕ್​ ತಂಡ ಮೊದಲ ದಿನದ ಅಂತ್ಯಕ್ಕೆ ಎರಡು ವಿಕೆಟ್​ ಕಳೆದುಕೊಂಡು 139 ರನ್​​ಗಳಿಸಿತು. ಇನ್ನು ಮಸೂದ್​​ 46 ರನ್​ ಗಳಿಸಿದರು. ಬಾಬರ್​ ಮತ್ತು ಮಸೂದ್​ ಇಬ್ಬರು ಕ್ರಿಸ್​ ಕಾಯ್ದುಕೊಂಡಿದ್ದು, ತಂಡಕ್ಕೆ ಚೇತರಿಕೆ ತಂದುಕೊಟ್ಟಿದ್ದಾರೆ.

ಇಂಗ್ಲೆಂಡ್​ ಪರ ಜೋಫ್ರಾ ಆರ್ಚರ್ ಹಾಗೂ ಕ್ರಿಸ್​ ವೋಕ್ಸ್​ ತಲಾ ಒಂದು ವಿಕೆಟ್​​ ಪಡೆದರು.

ABOUT THE AUTHOR

...view details