ಮಾಂಚೆಸ್ಟರ್ :ಇಲ್ಲಿನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಆಯೋಜನೆಗೊಂಡಿದ್ದ ಇಂಗ್ಲೆಂಡ್ ಹಾಗೂ ಪ್ರವಾಸಿ ಪಾಕಿಸ್ತಾನ ತಂಡಗಳ ನಡುವಿನ ಮೊದಲ ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವು ಮಳೆ ಹಿನ್ನೆಲೆ ಕೇವಲ 16.1 ಓವರ್ಗಳ ಆಟದೊಂದಿಗೆ ರದ್ದಾಗಿದೆ.
ಟಾಸ್ ಗೆದ್ದ ಪಾಕಿಸ್ತಾನ ಅತಿಥೇಯ ಆಂಗ್ಲರನ್ನು ಬ್ಯಾಟಿಂಗ್ಗೆ ಆಹ್ವಾನಿಸಿತ್ತು. ಇಂಗ್ಲೆಂಡ್ ಆರಂಭದಲ್ಲೇ ಜಾನಿ ಬೇರ್ಸ್ಟೋವ್ (2) ವಿಕೆಟ್ ಕಳೆದುಕೊಂಡಿತ್ತು. ಆದರೆ ಮತ್ತೊಬ್ಬ ಆರಂಭಿಕ ಆಟಗಾರ ಟಾಮ್ ಬಾಂಟನ್ ಅರ್ಧಶತಕ (72) ನೆರವಿನಿಂದ ಉತ್ತಮ ಮೊತ್ತ ಗಳಿಸುವತ್ತ ಸಾಗಿತ್ತು.