ಬೆಕೆನ್ಹಾಮ್:19 ವರ್ಷದೊಳಗಿನ ತ್ರಿಕೋನ ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡ, ಇಂಗ್ಲೆಂಡ್ ವಿರುದ್ಧ ಕೊನೆಯ ಲೀಗ್ ಪಂದ್ಯದಲ್ಲಿ 8 ವಿಕೆಟ್ಗಳಿಂದ ಸೋಲೊಪ್ಪಿಕೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 278 ರನ್ಗಳಿಸಿತು. ಆರಂಭಿಕ ಬ್ಯಾಟ್ಸ್ಮನ್ 102, ನಾಯಕ ಪ್ರಿಯಂ ಗರ್ಗ್ 51, ತಿಲಕ್ ವರ್ಮಾ 52 ರನ್ಗಳಿಸಿದ್ದರು.
279 ರನ್ಗಳ ಟಾರ್ಗೆಟ್ ಪಡೆದಿದ್ದ ಇಂಗ್ಲೆಂಡ್ ಯುವ ತಂಡ ಚೇಸಿಂಗ್ ಮಾಡುವ ವೇಳೆ ಮಳೆ ಬಂದಿದ್ದರಿಂದ ಡಕ್‌ವರ್ಥ್ ಲೂಯಿಸ್ ನಿಯಮದ ಪ್ರಕಾರ, ಓವರ್ ಮಿತಿಯನ್ನು 42 ಓವರ್ ಗಳಿಸಿ 214 ರನ್ಗಳ ಗುರಿ ನೀಡಲಾಗಿತ್ತು.