ಮ್ಯಾಂಚೆಸ್ಟರ್ :ಜುಲೈ 8ರಿಂದ ಪ್ರಾರಂಭವಾಗುವ ಬಹು ನಿರೀಕ್ಷಿತ ಟೆಸ್ಟ್ ಸರಣಿಗೆ ವಿಂಡೀಸ್ ಸಜ್ಜಾಗಿರುವುದರಿಂದ ಟ್ರೋಫಿಯೊಂದಿಗೆ ತವರಿಗೆ ಮರಳುವುದೊಂದೇ ತಂಡದ ಅಂತಿಮ ಗುರಿ ಎಂದು ವೆಸ್ಟ್ ಇಂಡೀಸ್ ವೇಗದ ಬೌಲರ್ ಕೆಮರ್ ರೋಚ್ ತಿಳಿಸಿದ್ದಾರೆ.
ಕೊರೊನಾ ವೈರಸ್ನಿಂದಾಗಿ ಮಾರ್ಚ್‌ನಲ್ಲಿ ಸ್ಥಗಿತವಾಗಿದ್ದ ಕ್ರಿಕೆಟ್ ಪಂದ್ಯಾವಳಿಗಳು ಇದೀಗ ಏಗಾಸ್ ಬೌಲ್‌ನಲ್ಲಿ ಮೊದಲ ಪಂದ್ಯ ಪುನರಾರಂಭವಾಗಲಿದೆ. ಜೊತೆಗೆ ಸರಣಿಯ ಅಂತಿಮ 2 ಟೆಸ್ಟ್‌ಗಳು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿದೆ.