ಕರ್ನಾಟಕ

karnataka

By

Published : Jan 25, 2021, 4:36 PM IST

ETV Bharat / sports

ಭಾರತ ಸೇರಿದಂತೆ ನಾಲ್ಕು ರಾಷ್ಟ್ರಗಳೊಂದಗಿನ ಬೇಸಿಗೆ ವೇಳಾಪಟ್ಟಿ ಬಿಡುಗಡೆ ಮಾಡಿದ ಇಸಿಬಿ​!

ಸೋಮವಾರ ನಾಲ್ಕು ರಾಷ್ಟ್ರಗಳೊಂದಗಿನ ವೇಳಾಪಟ್ಟಿಯನ್ನು ಇಸಿಬಿ ಪ್ರಕಟಿಸಿದೆ. ಟೆಸ್ಟ್​ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್​ ವಿರುದ್ಧ ಜೂನ್​ 2ರಿಂದ 6ವರೆಗೆ ಲಾರ್ಡ್ಸ್​ನಲ್ಲಿ ಮೊದಲ ಟೆಸ್ಟ್​ ಮತ್ತು ಎಡ್ಗ್​ಬಸ್ಟನ್​ನಲ್ಲಿ ಜೂನ್​ 10ರಿಂದ 2ನೇ ಟೆಸ್ಟ್​ ಪಂದ್ಯ ನಡೆಯಲಿದೆ..

ನ್ಯೂಜಿಲ್ಯಾಂಡ್​ vs ಇಂಗ್ಲೆಂಡ್
ನ್ಯೂಜಿಲ್ಯಾಂಡ್​ vs ಇಂಗ್ಲೆಂಡ್

ಲಂಡನ್ ​:ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್​ 2021ರ ಬೇಸಿಗೆ ವೇಳಾಪಟ್ಟಿ ಪ್ರಕಟಿಸಿದೆ. ಮೊದಲ ಟಾಪ್​ ರ್ಯಾಂಕ್​ ತಂಡವಾದ ನ್ಯೂಜಿಲ್ಯಾಂಡ್ ವಿರುದ್ಧ 2 ಟೆಸ್ಟ್​ ಪಂದ್ಯಗಳನ್ನು ಆಡಲಿದೆ.

ಸೋಮವಾರ ನಾಲ್ಕು ರಾಷ್ಟ್ರಗಳೊಂದಿಗಿನ ಪಂದ್ಯಗಳ ವೇಳಾಪಟ್ಟಿಯನ್ನು ಇಸಿಬಿ ಪ್ರಕಟಿಸಿದೆ. ಟೆಸ್ಟ್​ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್​ ವಿರುದ್ಧ ಜೂನ್​ 2ರಿಂದ 6ವರೆಗೆ ಲಾರ್ಡ್ಸ್​ನಲ್ಲಿ ಮೊದಲ ಟೆಸ್ಟ್​ ಮತ್ತು ಎಡ್ಗ್​ಬಸ್ಟನ್​ನಲ್ಲಿ ಜೂನ್​ 10ರಿಂದ 2ನೇ ಟೆಸ್ಟ್​ ಪಂದ್ಯ ನಡೆಯಲಿದೆ.

ಈ ಸರಣಿ ಮುಗಿಯುತ್ತಿದ್ದಂತೆ ಶ್ರೀಲಂಕಾ ತಂಡದ ವಿರುದ್ಧ ಸೀಮಿತ ಓವರ್​ಗಳ ಸರಣಿಗೆ ಆತಿಥ್ಯ ನೀಡಲಿದೆ. ದ್ವೀಪ ರಾಷ್ಟ್ರದ ವಿರುದ್ಧ ಆಂಗ್ಲರ ತಂಡ 3 ಪಂದ್ಯಗಳ ಏಕದಿನ ಸರಣಿ ಮತ್ತು 3 ಪಂದ್ಯಗಳ ಟಿ20 ಸರಣಿ ನಡೆಯಲಿದೆ.

ಜೂನ್ 23, 24 ಮತ್ತು 26ರಂದು ಟಿ20 ಪಂದ್ಯಗಳು ನಡೆಯಲಿವೆ. ನಂತರ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಜುಲೈ 6ರಿಂದ 20ರವರೆಗೆ ಪಾಕಿಸ್ತಾನದ ವಿರುದ್ಧ ತಲಾ ಮೂರು ಟಿ20 ಮತ್ತು 3 ಏಕದಿನ ಸರಣಿಯನ್ನಾಡಲಿದೆ. ಇದರ ಬೆನ್ನಲ್ಲೇ ಭಾರತದ ವಿರುದ್ಧ 5 ಪಂದ್ಯಗಳ ಟೆಸ್ಟ್​ ಸರಣಿಯನ್ನಾಡಲಿದೆ.

ಇದನ್ನು ಓದಿ: ನಾನು ಆಡುವ ಬಗ್ಗೆ ಮ್ಯಾನೇಜ್​ಮೆಂಟ್​ ನಿರ್ಧರಿಸಲಿದೆ : ವೃದ್ಧಿಮಾನ್ ಸಹಾ

ABOUT THE AUTHOR

...view details