ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್ ನಾಯಕ ಜೋ ರೂಟ್ ವಿಂಡೀಸ್ ಟೆಸ್ಟ್​ಗೆ ಅಲಭ್ಯ: ಕಾರಣ ಈ ಖುಷಿ ಸುದ್ದಿ! - ವೆಸ್ಟ್ ಇಂಡೀಸ್ ವಿರುದ್ಧ ಮೂರು ಟೆಸ್ಟ್ ಪಂದ್ಯ

2017 ರಲ್ಲಿ ಇಂಗ್ಲೆಂಡ್‌ ತಂಡದ ನಾಯಕನಾಗಿ ಆಯ್ಕೆಯಾಗಿರುವ ಜೋ ರೂಟ್ ಟೆಸ್ಟ್ ಪಂದ್ಯ ತಪ್ಪಿಸಿಕೊಂಡಿಲ್ಲ. ಆದ್ರೆ ಪತ್ನಿ ಕ್ಯಾರಿ ಜುಲೈ ಆರಂಭದಲ್ಲಿ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಲಿರುವುದರಿಂದ ಈ ಬಾರಿಯ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯದಿಂದ ಹಿಂದೆ ಸರಿಯಲಿದ್ದಾರೆ.

England skipper Joe Root could miss 1st Windies Test for birth of child
ಇಂಗ್ಲೆಂಡ್ ನಾಯಕ ಜೋ ರೂಟ್

By

Published : Jun 3, 2020, 3:28 PM IST

ಲಂಡನ್​:ಮುಂದಿನ ತಿಂಗಳು ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಟೆಸ್ಟ್ ನಾಯಕ ಜೋ ರೂಟ್ ಅಲಭ್ಯರಾಗಲಿದ್ದಾರೆ.

ರೂಟ್‌ ಅವರ ಪತ್ನಿ ಕ್ಯಾರಿ ಜುಲೈ ಆರಂಭದಲ್ಲಿ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಲಿದ್ದು, ಈ ಕಾರಣದಿಂದಾಗಿ ರೂಟ್ ತಮ್ಮ ಜೀವಿತಾವಧಿಯಲ್ಲಿಯೇ ಮೊದಲ ಬಾರಿಗೆ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ.

ಪತ್ನಿ ಕ್ಯಾರಿಯೊಂದಿಗೆ ಜೋ ರೂಟ್

2017ರಲ್ಲಿ ನಾಯಕನಾಗಿ ನೇಮಕಗೊಂಡಾಗಿನಿಂದ ಟೆಸ್ಟ್ ತಪ್ಪಿಸದ 29 ವರ್ಷದ ರೂಟ್​, ನಾಕ್-ಆನ್ ಕ್ರಿಕೆಟಿಂಗ್ ಪರಿಣಾಮಗಳನ್ನು ಲೆಕ್ಕಿಸದೆ ತಾನು ಉಪಸ್ಥಿತನಿರುತ್ತೇನೆ ಎಂದು ದೃಢಪಡಿಸಿದ್ದಾರೆ. ಇದರ ಜೊತೆಗೆ ಬೆನ್ ಸ್ಟೋಕ್ಸ್ ತಂಡವನ್ನು ಮುನ್ನಡೆಸಲು ಅನುಮೋದಿಸಿದ್ದಾರೆ.

"ಬೆನ್ ನಾಯಕನಾಗಿದ್ದರೆ ಅವನು ಅದ್ಭುತವಾಗಿ ಆಡಲಿದ್ದಾನೆ. ಉಪ-ನಾಯಕನಾಗಿ ಬೆನ್​​ ತನ್ನ ತರಬೇತಿಯ ವೇಳೆ ಸಾಗುವ ರೀತಿ, ಕಷ್ಟದ ಸಂದರ್ಭಗಳಲ್ಲಿ ಬೌಲಿಂಗ್ ಮಾಡುವ ತಂತ್ರಗಾರಿಕೆ, ವಿಭಿನ್ನ ಸನ್ನಿವೇಶಗಳಲ್ಲಿ ಬ್ಯಾಟ್​ ಮೂಲಕ ಸಾಮರ್ಥ್ಯ ತೋರಿಸಿದ್ದಾನೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್ vs ವಿಂಡೀಸ್‌ ನಡುವಣ ಮೊದಲ ಟೆಸ್ಟ್ ಪಂದ್ಯ ಸೌತಾಂಪ್ಟನ್‌ನಲ್ಲಿ ಜುಲೈ 8 ರಿಂದ ಪ್ರಾರಂಭವಾಗಲಿದೆ.

ABOUT THE AUTHOR

...view details