ಮ್ಯಾಂಚೆಸ್ಟರ್:ಸ್ಪಿನ್ನರ್ ಆ್ಯಡಂ ಜಂಪಾ ಮತ್ತು ಮಿಚೆಲ್ ಸ್ಟಾರ್ಕ್ ಬೌಲಿಂಗ್ ದಾಳಿಗೆ ತತ್ತಿರಿಸಿದ ಅತಿಥೇಯ ಇಂಗ್ಲೆಂಡ್ ತಂಡ ಎರಡನೇ ಪಂದ್ಯದಲ್ಲಿ ಕೇವಲ 231 ರನ್ಗಳಿಸಿದೆ.
ಟಾಸ್ ಗೆದ್ದಯ ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 231 ರನ್ಗಳಿಸಿದೆ.
ಕಳೆದ ಪಂದ್ಯದಲ್ಲಿ 84 ರನ್ ಸಿಡಿಸಿದ್ದ ಜಾನಿ ಬೈರ್ಸಟೋವ್ ಇಂದು ಶೂನ್ಯ ಸಂಪಾದಿಸಿದರು. ಮತ್ತೊಬ್ಬ ಆರಂಭಿಕ ಜೇಸನ್ ರಾಯ್ 21 ರನ್ಗಳಿಸಿದ್ದ ವೇಳೆ ರನ್ಔಟ್ ಆದರು. ಈ ಹಂತದಲ್ಲಿ ಒಂದಾದ ಜೋ ರೂಟ್ ಹಾಗೂ ನಾಯಕ ಇಯಾನ್ ಮಾರ್ಗನ್ 3ನೇ ವಿಕೆಟ್ಗೆ 61 ರನ್ಗಳ ಜೊತೆಯಾಟ ನೀಡಿದರು. ನಿಧಾನಗತಿ ಆಟಕ್ಕೆ ಮೊರೆ ಹೋದ ರೂಟ್ 73 ಎಸೆತಗಳಲ್ಲಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿ 39 ರನ್ಗಳಿಸಿ ಜಂಪಾಗೆ ವಿಕೆಟ್ ಒಪ್ಪಿಸಿದರರು.
ನಂತರ ಬಂದ ಬಟ್ಲರ್(3) ಕಮ್ಮಿನ್ಸ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರೆ, 42 ರನ್ ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ನಾಯಕ ಮಾರ್ಗನ್ ಜಂಪಾ ಬೌಲಿಂಗ್ನಲ್ಲಿ ಫಿಂಚ್ ನೀಡಿ ಔಟಾದರು. ಕಳೆದ ಪಂದ್ಯದ ಶತಕವೀರ ಸ್ಯಾಮ್ ಬಿಲ್ಲಿಂಗ್ಸ್(8) ಸ್ಯಾಮ್ ಕರ್ರನ್(1) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರೆ ವೋಕ್ಸ್ ಆಟ 26ಕ್ಕೆ ಸೀಮಿತವಾಯಿತು.