ಲಂಡನ್:ಆಗಸ್ಟ್ 1ರಿಂದ ಆರಂಭಗೊಳ್ಳಲಿರುವ ಹೈವೋಲ್ಟೇಜ್ ಆ್ಯಶಸ್ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ 14 ಸದಸ್ಯರನ್ನೊಳಗೊಂಡ ತಂಡ ಪ್ರಕಟಿಸಿದ್ದು, ವಿಶ್ವಕಪ್ ಹೀರೊ ಬೆನ್ ಸ್ಟೋಕ್ಸ್ಗೆ ಉಪನಾಯಕನ ಪಟ್ಟ ನೀಡಲಾಗಿದೆ.
ಇಂಗ್ಲೆಂಡ್ ತಂಡವನ್ನು ಜೋ ರೂಟ್ ಮುನ್ನಡೆಸಲಿದ್ದು, ವಿಶ್ವಕಪ್ನಲ್ಲಿ ಆಂಗ್ಲರ ಪರ ಅತಿ ಹೆಚ್ಚು ವಿಕೆಟ್ ಪಡೆದುಕೊಂಡಿರುವ ವೇಗಿ ಜೋಫ್ರಾ ಆರ್ಚರ್ಗೆ ಚೊಚ್ಚಲ ಬಾರಿಗೆ ತಂಡ ಸೇರಿಕೊಳ್ಳಲು ಕರೆ ಬಂದಿದೆ. ಈಗಾಗಲೇ ಏಕದಿನ ಹಾಗೂ ಟಿ-20 ಪಂದ್ಯಗಳಲ್ಲಿ ಇವರು ಮಿಂಚು ಹರಿಸಿದ್ದಾರೆ.
ಬ್ರಿಸ್ಟೋಲ್ ನೈಟ್‌ಕ್ಲಬ್‌ನಲ್ಲಿ 2017ರಲ್ಲಿ ಬೆನ್ ಸ್ಟೋಕ್ಸ್ ವ್ಯಕ್ತಿಯೊಂದಿಗೆ ಹೊಡೆದಾಟ ನಡೆಸಿದ್ದರಿಂದ ಅವರನ್ನ ನಾಯಕನ ಸ್ಥಾನದಿಂದ ಇಸಿಬಿ ಕಿತ್ತು ಹಾಕಿತ್ತು. ಅದಾದ ಬಳಿಕ ವಿಶ್ವಕಪ್ನಲ್ಲಿ ಸ್ಟೋಕ್ಸ್ ಅದ್ಭುತ ಪ್ರದರ್ಶನ ನೀಡಿದ್ದು,ಇದೀಗ ಅವರಿಗೆ ಉಪನಾಯಕನ ಪಟ್ಟ ನೀಡಲಾಗಿದೆ.