ನವದೆಹಲಿ:ಭಾರತ-ಇಂಗ್ಲೆಂಡ್ ನಡುವೆ ನಡೆಯಬೇಕಾಗಿದ್ದ ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳ ಕ್ರಿಕೆಟ್ ಸರಣಿ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದ್ದು, ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ) ಇದಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿದೆ.
ಕೊರೊನಾ ವೈರಸ್: ಭಾರತ-ಇಂಗ್ಲೆಂಡ್ ನಡುವಿನ ಏಕದಿನ,ಟಿ-20 ಸರಣಿ 2021ಕ್ಕೆ ಮುಂದೂಡಿಕೆ! - ಇಂಗ್ಲೆಂಡ್ ಭಾರತದ ಪ್ರವಾಸ
ಭಾರತ-ಇಂಗ್ಲೆಂಡ್ ನಡುವಿನ ನಿಗದಿತ ಓವರ್ಗಳ ಕ್ರಿಕೆಟ್ ಟೂರ್ನಿ ಇದೀಗ ಕೊರೊನಾ ವೈರಸ್ ಕಾರಣ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ.
![ಕೊರೊನಾ ವೈರಸ್: ಭಾರತ-ಇಂಗ್ಲೆಂಡ್ ನಡುವಿನ ಏಕದಿನ,ಟಿ-20 ಸರಣಿ 2021ಕ್ಕೆ ಮುಂದೂಡಿಕೆ! Team india](https://etvbharatimages.akamaized.net/etvbharat/prod-images/768-512-8333589-thumbnail-3x2-wdfdf.jpg)
ಕೊರೊನಾ ವೈರಸ್ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿದೆ. ಸೆಪ್ಟೆಂಬರ್ ತಿಂಗಳಲ್ಲಿ ಉಭಯ ತಂಡಗಳ ನಡುವೆ ಈ ಟೂರ್ನಿ ಶುರುಗೊಳ್ಳಬೇಕಾಗಿತ್ತು. ಆದರೆ ಇದೇ ತಿಂಗಳಲ್ಲಿ ಐಪಿಎಲ್ ಹಾಗೂ ತದನಂತರ ಟಿ-20 ವಿಶ್ವಕಪ್ ನಡೆಯುವ ಕಾರಣ ಇದೀಗ ಈ ಟೂರ್ನಿ ಮುಂದಿನ ವರ್ಷ ಜನವರಿ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ.
ಮುಂದಿನ ವರ್ಷ ಜನವರಿಯಿಂದ ಮಾರ್ಚ್ ತಿಂಗಳವರೆಗೆ ಐದು ಟೆಸ್ಟ್ ಪಂದ್ಯ ಭಾರತದಲ್ಲಿ ಆಡಲು ಇಂಗ್ಲೆಂಡ್ ನಿರ್ಧರಿಸಿದೆ. ಇದರ ಮಧ್ಯೆ ಈ ಟೂರ್ನಿ ಕೂಡ ನಡೆಯುವ ಸಾಧ್ಯತೆ ಇದೆ. ಸೆಪ್ಟೆಂಬರ್ 19ರಿಂದ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯಲಿದ್ದು, ತದನಂತರ ಟಿ-20 ವಿಶ್ವಕಪ್ ಆರಂಭಗೊಳ್ಳಲಿದೆ.