ಕರ್ನಾಟಕ

karnataka

ETV Bharat / sports

ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್; ಭಾರತಕ್ಕಿದು ಮಾಡು ಇಲ್ಲವೇ ಮಡಿ ಪಂದ್ಯ - ಇಂಗ್ಲೆಂಡ್​ ವರ್ಸಸ್​ ಭಾರತ

ಭಾರತ-ಇಂಗ್ಲೆಂಡ್​ ನಡುವೆ ನಾಲ್ಕನೇ ಟಿ20 ಆರಂಭಗೊಂಡಿದ್ದು, ಇದು ಕೊಹ್ಲಿ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

India vs England
India vs England

By

Published : Mar 18, 2021, 6:49 PM IST

ಅಹಮದಾಬಾದ್​: ಟೀಂ ಇಂಡಿಯಾ ವಿರುದ್ಧದ 4ನೇ ಟಿ-20 ಪಂದ್ಯದಲ್ಲಿ ಟಾಸ್​ ಗೆದ್ದ ಇಂಗ್ಲೆಂಡ್​ ತಂಡ ಕ್ಷೇತ್ರ ರಕ್ಷಣೆ ಆಯ್ದುಕೊಂಡಿದ್ದು, ಸರಣಿ ಜೀವಂತಕ್ಕೆ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ.

ಈಗಾಗಲೇ ಸರಣಿಯಲ್ಲಿ ಇಂಗ್ಲೆಂಡ್​ 2-1 ಅಂತರದ ಮುನ್ನಡೆ ಪಡೆದುಕೊಂಡಿದ್ದು, ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ. ಟೀಂ ಇಂಡಿಯಾ ತಿರುಗೇಟು ನೀಡಿ, ಸರಣಿ ಜೀವಂತವಾಗಿರಿಸಿಕೊಳ್ಳುವ ಉತ್ಸಾಹದಲ್ಲಿದೆ.

ಅಡುವ 11ರ ಬಳಗ

ಟೀಂ ಇಂಡಿಯಾ: ರೋಹಿತ್​ ಶರ್ಮಾ, ಕೆ.ಎಲ್​ ರಾಹುಲ್​, ವಿರಾಟ್​ ಕೊಹ್ಲಿ(ಕ್ಯಾಪ್ಟನ್​), ಸೂರ್ಯಕುಮಾರ್ ಯಾದವ್​, ರಿಷಭ್​ ಪಂತ್​(ವಿ.ಕೀ), ಶ್ರೇಯಸ್ ಅಯ್ಯರ್​, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್​ ಸುಂದರ್​, ಶಾರ್ದೂಲ್​ ಠಾಕೂರ್​, ಭುವನೇಶ್ವರ್​ ಕುಮಾರ್​, ರಾಹುಲ್​ ಚಹರ್​

ಈ ಹಿಂದಿನ ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದ ಕಾರಣ ಯಜುವೇಂದ್ರ ಚಹಾಲ್​ ಬದಲಿಗೆ ರಾಹುಲ್ ಚಹರ್​ಗೆ ಅವಕಾಶ ನೀಡಲಾಗಿದ್ದು, ಇಶನ್ ಕಿಶನ್ ಬದಲಿಗೆ ಸೂರ್ಯಕುಮಾರ್ ಯಾದವ್ ತಂಡ ಸೇರಿಕೊಂಡಿದ್ದಾರೆ.

ಇಂಗ್ಲೆಂಡ್​:ಜೇಸನ್​ ರಾಯ್, ಜೋಸ್ ಬಟ್ಲರ್​​(ವಿ.ಕೀ), ಡೇವಿಡ್​ ಮಲನ್​, ಬೈರ್​ಸ್ಟೋ, ಇಯಾನ್ ಮಾರ್ಗನ್​(ಕ್ಯಾಪ್ಟನ್​), ಬೆನ್​ ಸ್ಟೋಕ್ಸ್​, ಸ್ಯಾಮ್​ ಕರ್ರನ್​, ಕ್ರಿಸ್ ಜೋರ್ಡನ್​, ಜೋಫ್ರಾ ಆರ್ಚರ್​, ಆದಿಲ್ ರಾಶೀದ್​, ಮಾರ್ಕ್​ ವುಡ್​

ಇಂಗ್ಲೆಂಡ್​ ತಂಡ ಮೂರನೇ ಟಿ-20 ಕಣಕ್ಕಿಳಿದಿದ್ದ ತಂಡವನ್ನೇ 4ನೇ ಪಂದ್ಯದಲ್ಲೂ ಕಣಕ್ಕಿಳಿಸಿದೆ.

ABOUT THE AUTHOR

...view details