ಕರ್ನಾಟಕ

karnataka

ETV Bharat / sports

ಐಪಿಎಲ್​ನಿಂದ ಹಿಂದೆ ಸರಿದ ​ಇಂಗ್ಲೆಂಡ್​ ವೇಗಿ: ಡೆಲ್ಲಿ ಕ್ಯಾಪಿಟಲ್​​​​​​ ಮುಂದಿದೆ ಈ ಮೂವರ ಹೆಸರು! - ಇಂಗ್ಲೆಂಡ್​ ವೇಗಿ ಕ್ರಿಸ್​ ವೋಕ್ಸ್​

ಡಿಸೆಂಬರ್​ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 1.5 ಕೋಟಿ ರೂ.ಗಳಿಗೆ ಡೆಲ್ಲಿ ಕ್ಯಾಪಿಟಲ್​ ತಂಡಕ್ಕೆ ಸೇರ್ಪಡೆಯಾಗಿದ್ದರು. 2018ರಿಂದ ಯಾವುದೇ ಟಿ-20 ಪಂದ್ಯದಲ್ಲೂ ಕಾಣಿಸಿಕೊಳ್ಳದ ವೋಕ್ಸ್, 2015ರಿಂದ ಇಂಗ್ಲೆಂಡ್​ ಪರವೂ ಚುಟುಕು ಕ್ರಿಕೆಟ್​ನಿಂದ ಹೊರಗುಳಿದಿದ್ದಾರೆ.

Chris Woakes withdraws from IPL
ಕ್ರಿಸ್​​ ವೋಕ್ಸ್​

By

Published : Mar 7, 2020, 7:10 PM IST

ನವದೆಹಲಿ: ತವರಿನಲ್ಲಿ ನಡೆಯಲಿರುವ ಟೆಸ್ಟ್​​ ಸರಣಿಗಳನ್ನು ಗಮನದಲ್ಲಿಟ್ಟುಕೊಂಡು ಇಂಗ್ಲೆಂಡ್​ ವೇಗಿ ಕ್ರಿಸ್​ ವೋಕ್ಸ್​ ಐಪಿಎಲ್​ನಿಂದ ಹಿಂದೆ ಸರಿದಿರುವುದು ಡೆಲ್ಲಿ ಕ್ಯಾಪಿಟಲ್​ಗೆ ಅಘಾತ ತಂದಿದೆ.

ಡಿಸೆಂಬರ್​ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 1.5 ಕೋಟಿ ರೂ.ಗಳಿಗೆ ಡೆಲ್ಲಿ ಕ್ಯಾಪಿಟಲ್​ ತಂಡಕ್ಕೆ ಸೇರ್ಪಡೆಯಾಗಿದ್ದರು. 2018ರಿಂದ ಯಾವುದೇ ಟಿ-20 ಪಂದ್ಯದಲ್ಲೂ ಕಾಣಿಸಿಕೊಳ್ಳದ ವೋಕ್ಸ್, 2015ರಿಂದ ಇಂಗ್ಲೆಂಡ್​ ಪರವೂ ಚುಟುಕು ಕ್ರಿಕೆಟ್​ನಿಂದ ಹೊರಗುಳಿದಿದ್ದಾರೆ.

ಇನ್ನು ಐಪಿಎಲ್​ನಲ್ಲಿ 2017ರಲ್ಲಿ ಕೆಕೆಆರ್​ ಪರ ಆಡಿದ್ದ ಅವರು 17 ವಿಕೆಟ್​ ಪಡೆದಿದ್ದರು. ನಂತರ ಆರ್​ಸಿಬಿ ಪರ ಆಡಿ ಕಳಪೆ ಪ್ರದರ್ಶನ ನೀಡಿದ್ದರು. ಆದರೆ 2019ರಲ್ಲಿ ಏಕದಿನ ವಿಶ್ವಕಪ್​​​ನಲ್ಲಿ ಆಡುವ ದೃಷ್ಠಿಯಿಂದ ಐಪಿಎಲ್​ನಲ್ಲಿ ಪಾಲ್ಗೊಂಡಿರಲಿಲ್ಲ.

ಇದೀಗ ಬೇಸಿಗೆಯಲ್ಲಿ ತವರಿನಲ್ಲಿ ನಡೆಯಲಿರುವ ಟೆಸ್ಟ್​ಗಳಲ್ಲಿ ಭಾಗಿಯಾಗಲು ಬಯಸಿರುವ ಅವರು, ಫಿಟ್ನೆಸ್​​​ ಕಾಪಾಡಿಕೊಳ್ಳಲು ಐಪಿಎಲ್​ನಿಂದ ದೂರ ಉಳಿಯುವ ದೃಷ್ಠಿಯಿಂದ ಡೆಲ್ಲಿ ಕ್ಯಾಪಿಟಲ್​ ಜೊತೆ ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿದುಕೊಂಡಿದ್ದಾರೆ.

ಈಗಾಗಲೇ ರಬಾಡ ಐಪಿಎಲ್​ನಲ್ಲಿ ಆಡುವುದು ಕೂಡ ಅನುಮಾನವಾಗಿದೆ. ಇಂತಹ ಸಂದರ್ಭದಲ್ಲಿ ವೋಕ್ಸ್​ ಅವರ ದಿಢೀರ್ ನಿರ್ಧಾರದಿಂದ ಕಂಗಾಲಾಗಿರುವ ಡೆಲ್ಲಿ ಕ್ಯಾಪಿಟಲ್​ ಫ್ರಾಂಚೈಸಿ ವಿದೇಸಿ ಬೌಲರ್​ನ ಹುಡುಕಾಟದಲ್ಲಿದೆ. ​

ಕ್ರಿಸ್​ ವೋಕ್ಸ್​ರ ಬದಲಿಗೆ ಐಪಿಎಲ್​ ಹರಾಜಿನಲ್ಲಿ ಯಾವ ತಂಡವೂ ಖರೀದಿಸದ ಆಟಗಾರರನ್ನು ಡೆಲ್ಲಿ ಕ್ಯಾಪಿಟಲ್​ ಖರೀದಿಸಲು ಮುಂದಾಗಿದೆ ಎನ್ನಲಾಗಿದೆ. ಇದರಲ್ಲಿ ಆಸ್ಟ್ರೇಲಿಯಾ ಬೆನ್​ ಕಟಿಂಗ್​, ನ್ಯೂಜಿಲೆಂಡ್​ನ ಆ್ಯಡಂ ಮಿಲ್ಲೆ ಹಾಗೂ ಕಾಲಿನ್​ ಡಿ ಗ್ರ್ಯಾಂಡ್​ಹೋಮ್​ ಹೆಸರು ಕೇಳಿಬರುತ್ತಿದೆ.

ABOUT THE AUTHOR

...view details