ಕರ್ನಾಟಕ

karnataka

ETV Bharat / sports

ಹೀದರ್​ ನೈಟ್​ ಭರ್ಜರಿ ಶತಕ...ವಿಶ್ವಕಪ್​ನಲ್ಲಿ ಮೊದಲ ಗೆಲುವು ಸಾಧಿಸಿದ ಇಂಗ್ಲೆಂಡ್​ - Heather Knight 108

ಇಂಗ್ಲೆಂಡ್​ ತಂಡದ ನಾಯಕಿ ಹೀದರ್​ ನೈಟ್​ ಅವರ ಭರ್ಜರಿ ಶತಕದ ನೆರವಿನಿಂದ ಇಂಗ್ಲೆಂಡ್ ತಂಡ ಥಾಯ್ಲೆಂಡ್​ ವಿರುದ್ಧ 98 ರನ್​ಗಳ ಭರ್ಜರಿ ಜಯ ಸಾಧಿಸಿದೆ.

womens t20 world cup
ಇಂಗ್ಲೆಂಡ್ - ಥಾಯ್ಲೆಂಡ್​ ಪಂದ್ಯದ ಹೈಲೈಟ್ಸ್​

By

Published : Feb 26, 2020, 5:43 PM IST

ಕ್ಯಾನ್ಬೆರಾ:ಹಾಲಿ ಮಹಿಳಾ ಏಕದಿನ ಕ್ರಿಕೆಟ್​ನ ವಿಶ್ವಚಾಂಪಿಯನ್ ಆಗಿರುವ ಇಂಗ್ಲೆಂಡ್​ ಕ್ರಿಕೆಟ್​ ಶಿಶು ಥಾಯ್ಲೆಂಡ್​ ವಿರುದ್ಧ 98 ರನ್​ಗಳ ಸುಲಭ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ.

ಟಾಸ್​ಸೋತು ಬ್ಯಾಟಿಂಗ್​ ಇಳಿದ ಇಂಗ್ಲೆಂಡ್​ಗೆ ಥಾಯ್ಲೆಂಡ್​ ಆರಂಭದಲ್ಲೇ ಆಘಾತ ನೀಡಿತು. ಆರಂಭಿಕರಾದ ಆ್ಯಮಿ ಜಾನ್ಸ್​ ಹಾಗೂ ಡೇನಿಯಲ್​ ವೇಟ್​ ಅವರನ್ನು ಶೂನ್ಯಕ್ಕೆ ಔಟ್​ ಮಾಡುವ ಮೂಲಕ ಶಾಕ್​ ನೀಡಿತು.

ಆದರೆ, ಇಂಗ್ಲೆಂಡ್​ ತಂಡದ ನಾಯಕಿ ಹೀದರ್​ ನೈಟ್​ ಹಾಗೂ ಆಲ್​ರೌಂಡರ್​ ನಟಿಲೆ ಸೀವರ್​ ಮುರಿಯದ ಮೂರನೇ ವಿಕೆಟ್​ಗೆ 169 ರನ್​ಗಳ ಜೊತೆಯಾಟ ನಡೆಸಿ 176 ರನ್​ಗಳ ಬೃಹತ್​ ಮೊತ್ತ ಕಲೆಹಾಕಲು ನೆರವಾದರು.

ಇಂಗ್ಲೆಂಡ್ - ಥಾಯ್ಲೆಂಡ್​ ಪಂದ್ಯದ ಹೈಲೈಟ್ಸ್​

ಹೀದರ್​ ನೈಟ್​ ಕೇವಲ 66 ಎಸೆತಗಳಲ್ಲಿ 4 ಸಿಕ್ಸರ್ಸ್​ ಹಾಗೂ 13 ಬೌಂಡರಿಗಳ ನೆರವಿನಿಂದ 108 ರನ್​ಗಳಿಸಿದರು. ಇವರಿಗೆ ಸಾತ್​ ನೀಡಿದ ಸೀವರ್​ 52 ಎಸೆತಗಳಲ್ಲಿ 8 ಬೌಂಡರಿ ಸಹಿತ 59 ರನ್​ಗಳಿಸಿದರು.

ಇನ್ನು 177ರನ್​ಗಳ ಬೃಹತ್​ ಗುರಿ ಬೆನ್ನಟ್ಟಿದ ಥಾಯ್ಲೆಂಡ್​ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 78 ರನ್​ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕ ಬ್ಯಾಟ್ಸ್​ವುಮನ್​ ನಟ್ಟಾಕನ್​ ಚಂಟಮ್​ 53 ಎಸೆತಗಳಲ್ಲಿ 32 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು.

ಬೌಲಿಂಗ್​ನಲ್ಲಿ ಮಿಂಚಿದ ಅನ್ಯಾ ಶ್ರುಬ್ಸೋಲ್​ 3 ವಿಕೆಟ್​, ನಟಿಲೆ ಸೀವರ್​ 2 ವಿಕೆಟ್​ ಹಾಗೂ ಸ್ಪಿನ್ನರ್​ ಸೋಫಿಯಾ ಎಕ್ಲೆಸ್ಟೋನ್​ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ABOUT THE AUTHOR

...view details