ಕರ್ನಾಟಕ

karnataka

By

Published : Mar 3, 2020, 12:13 PM IST

ETV Bharat / sports

ಕೊರೊನಾ ವೈರಸ್​ ಭಯ: ಶ್ರೀಲಂಕಾ ಪ್ಲೇಯರ್ಸ್​ಗೆ ಹಸ್ತಲಾಘವ ಮಾಡಲ್ವಂತೆ ಆಂಗ್ಲರ ತಂಡ!

ಕೊರೊನಾ ವೈರಸ್​ನಿಂದ ಇಡೀ ಪ್ರಪಂಚದ ಜನರೇ ಭಯಗೊಂಡಿದ್ದಾರೆ. ಇದೀಗ ಶ್ರೀಲಂಕಾ ಪ್ರವಾಸ ಕೈಗೊಳ್ಳುತ್ತಿರುವ ಇಂಗ್ಲೆಂಡ್​ ತಂಡ ಅಲ್ಲಿನ ಪ್ಲೇಯರ್ಸ್ ಜತೆ ಕೈ ಕುಲುಕದಿರಲು ನಿರ್ಧರಿಸಿದೆ.

England cricketers will not shake hands on Sri Lanka tour
England cricketers will not shake hands on Sri Lanka tour

ಮೆಲ್ಬೊರ್ನ್​: ಪ್ರಪಂಚದಾದ್ಯಂತ ಕೊರೊನಾ ವೈರಸ್​ ರೌದ್ರನರ್ತನ ಜೋರಾಗಿದ್ದು, ಈಗಾಗಲೇ 3 ಸಾವಿರಕ್ಕೂ ಅಧಿಕ ಜನರ ಜೀವ ಬಲಿ ಪಡೆದುಕೊಂಡಿದೆ. ಇದರ ಮಧ್ಯೆ ಇಂಗ್ಲೆಂಡ್​ ತಂಡ ಹೊಸದೊಂದು ನಿರ್ಧಾರ ಕೈಗೊಂಡಿದೆ.

ಕೊರೊನಾ ವೈರಸ್​ ಭಯ

ಮಾರ್ಚ್​​ 19ರಿಂದ ಆರಂಭಗೊಳ್ಳಲಿರುವ ಕ್ರಿಕೆಟ್​ ಸರಣಿಗಾಗಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್​ ತಂಡ ಅಲ್ಲಿನ ಆಟಗಾರರೊಂದಿಗೆ ಹಸ್ತಲಾಘವ ಮಾಡದಿರಲು ನಿರ್ಧರಿಸಿದೆ. ಬದಲಾಗಿ ಮುಷ್ಠಿ ಮೂಲಕ ಹೈ ಹೇಳಲು ನಿರ್ಧರಿಸಿದೆ. ಕೊರೊನಾ ವೈರಸ್​ನಿಂದಾಗಿ ಆಂಗ್ಲ ಪಡೆ ಕೈಗೊಂಡಿದೆ.

ಶ್ರೀಲಂಕಾ ಪ್ಲೇಯರ್ಸ್​​

ಈ ವಿಷಯದ ಬಗ್ಗೆ ಮಾತನಾಡಿರುವ ಇಂಗ್ಲೆಂಡ್​ ತಂಡದ ಕ್ಯಾಪ್ಟನ್​ ಜೋ ರೂಟ್​​, ನಮ್ಮ ಆಟಗಾರರು ಶ್ರೀಲಂಕಾ ಪ್ರವಾಸದ ವೇಳೆ ಅಲ್ಲಿನ ಆಟಗಾರರೊಂದಿಗೆ ಹಸ್ತಲಾಘವ ಮಾಡುವುದಿಲ್ಲ. ಕೇವಲ ಮುಷ್ಠಿ ತೋರಿಸುವ ಮೂಲಕ ಶುಭ ಕೋರಲು ನಿರ್ಧರಿಸಿದ್ದು, ಸರಿಯಾಗಿ ಕೈ ತೊಳೆದುಕೊಳ್ಳಲು ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ. ಸದ್ಯ ದಕ್ಷಿಣ ಆಫ್ರಿಕಾದ ಜತೆ ಕ್ರಿಕೆಟ್​ ಸರಣಿಯಲ್ಲಿ ಭಾಗಿಯಾಗಿರುವ ಇಂಗ್ಲೆಂಡ್​ ತಂಡದ ಪ್ಲೇಯರ್ಸ್ ಜ್ವರದಿಂದ ಬಳಲಿದ್ದೇ ಇಂತಹ ನಿರ್ಧಾರಕ್ಕೆ ಕಾರಣವಾಗಿದೆ.

ABOUT THE AUTHOR

...view details