ಲಂಡನ್(ಇಂಗ್ಲೆಂಡ್): ಇಂಗ್ಲೆಂಡ್ ಕ್ರಿಕೆಟ್ ತಂಡದ ದಂತಕಥೆಗಳಾದ ಮಾಜಿ ನಾಯಕ ಜೆಫ್ರಿ ಬಾಯ್‌ಕಾಟ್ ಮತ್ತು ಆಂಡ್ರ್ಯೂ ಸ್ಟ್ರಾಸ್‌ಗೆ ಇಂಗ್ಲೆಂಡ್ನ ಪ್ರತಿಷ್ಟಿತ 'ನೈಟ್‌ಹುಡ್' ಪುರಸ್ಕಾರ ಲಭಿಸಿದೆ.
ಇವರಿಬ್ಬರನ್ನೂ ಯುಕೆ ಮಾಜಿ ಪ್ರಧಾನಿ ಥೆರೆಸಾ ಮೇ ಈ ಗೌರವಕ್ಕೆ ಆಯ್ಕೆ ಮಾಡಿದ್ದರು.
ಕ್ರಿಕೆಟ್ ಇತಿಹಾಸದಲ್ಲೇ ಕೇವಲ ನಾಲ್ಕು ಜನ ಮಾತ್ರ 151ಕ್ಕೂ ಹೆಚ್ಚು ಪ್ರಥಮ ದರ್ಜೆ ಶತಕಗಳನ್ನು ಸಿಡಿಸಿದ್ದಾರೆ. ಅವರಲ್ಲಿ ಬಾಯ್‌ಕಾಟ್ ಕೂಡಾ ಒಬ್ಬರಾಗಿದ್ದು, ಹೆಚ್ಚು ಕಾಲ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರಾಗಿ ಉಳಿದುಕೊಂಡಿದ್ದಾರೆ. ಇಂಗ್ಲೆಂಡ್ ಪರ 108 ಟೆಸ್ಟ್ ಹಾಗೂ 36 ಏಕದಿನ ಪಂದ್ಯಗಳನ್ನಾಡಿರುವ ಬಾಯ್‌ಕಾಟ್, ಮಾಜಿ ಗೆಳತಿ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ 1998 ರಲ್ಲಿ ಫ್ರಾನ್ಸ್‌ನಲ್ಲಿ ಅವರಿಗೆ ದಂಡ ಮತ್ತು ಅಮಾನತು ಶಿಕ್ಷೆ ವಿಧಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಅವರು ಪ್ರಕರಣದಲ್ಲಿ ತಮ್ಮ ಮುಗ್ಧತೆಯನ್ನು ಉಳಿಸಿಕೊಂಡಿದ್ದಾರೆ.