ಕರ್ನಾಟಕ

karnataka

ETV Bharat / sports

ಮೊದಲ ಟೆಸ್ಟ್​ ಪಂದ್ಯಕ್ಕೆ 13 ಸದಸ್ಯರ ತಂಡ ಪ್ರಕಟಿಸಿದ ಇಂಗ್ಲೆಂಡ್​.. ವಿಶ್ವಕಪ್​ ಸ್ಟಾರ್​ಗೆ ನಾಯಕತ್ವ

ಸೌತಾಂಪ್ಟನ್ ಏಜಸ್​ ಬೌಲ್​ನಲ್ಲಿ ​ಬಯೋ ಸೆಕ್ಯೂರ್ ವಾತಾವರಣದಲ್ಲಿ ಮೊದಲ ಟೆಸ್ಟ್​ ನಡೆಯಲಿದೆ. ಪ್ರೇಕ್ಷಕರಿಲ್ಲದೆ ಮೊದಲ ಬಾರಿಗೆ ಟೆಸ್ಟ್​ ಪಂದ್ಯ ನಡೆಯಲಿದೆ. ಎರಡು ಮತ್ತು 3ನೇ ಪಂದ್ಯ ಮ್ಯಾಂಚೆಸ್ಟರ್​ನಲ್ಲಿ ಜುಲೈ 16-20 ಹಾಗೂ ಜುಲೈ 24ರಿಂದ 28ರವರೆಗೆ ನಡೆಯಲಿದೆ..

West indies-England
ಬೆನ್ಸ್​ ಸ್ಟೋಕ್ಸ್​ಗೆ ಇಂಗ್ಲೆಂಡ್​ ನಾಯಕತ್ವ

By

Published : Jul 4, 2020, 5:18 PM IST

ಲಂಡನ್ ​:ಕೋವಿಡ್​-19 ಭೀತಿಯಿಂದ ಸ್ಥಗಿತಗೊಂಡಿದ್ದ ಕ್ರಿಕೆಟ್​ ಇದೀಗ ಮೂರು ತಿಂಗಳ ವಿರಾಮದ ನಂತರ ಮತ್ತೆ ಗರಿಗೆದರಿಕೊಳ್ಳುತ್ತಿದ್ದು, ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯಕ್ಕೆ 13 ಆಟಗಾರರ ತಂಡವನ್ನು ಇಸಿಬಿ ಪ್ರಕಟಿಸಿದೆ.

ವೆಸ್ಟ್​ ಇಂಡೀಸ್​ ತಂಡದ ವಿರುದ್ಧ ಜುಲೈ 8ರಿಂದ ಟೆಸ್ಟ್​ ಸರಣಿ ಆರಂಭಗೊಳ್ಳಲಿದ್ದು, ಇಂಗ್ಲೆಂಡ್​ ತಂಡದ ಕ್ಯಾಪ್ಟನ್​ ರೂಟ್ ತಮ್ಮ 2ನೇ ಮಗುವಿನ ನಿರೀಕ್ಷೆಯಲ್ಲಿರುವುದರಿಂದ ಮೊದಲ ಟೆಸ್ಟ್​ನಲ್ಲಿ ಭಾಗಿಯಾಗುತ್ತಿಲ್ಲ. ಆದ್ದರಿಂದ ವಿಶ್ವಕಪ್​ ಹಾಗೂ ಆ್ಯಶಸ್​ ಹೀರೋ ಬೆನ್​ಸ್ಟೋಕ್ಸ್​ಗೆ ನಾಯಕತ್ವ ಪಟ್ಟ ದಕ್ಕಿದೆ.

ಆರಂಭಿಕ ಬ್ಯಾಟ್ಸ್​ಮನ್​ ಜಾನಿ ಬ್ಯಾರ್ಸ್ಟೋವ್​ ಹಾಗೂ ಆಲ್​ರೌಂಡರ್​ ಮೋಯಿನ್​ ಅಲಿ ತಂಡದಿಂದ ಹೊರಬಿದ್ದಿದ್ದಾರೆ. ಶ್ರೀಲಂಕಾ ಸರಣಿಯಿಂದ ಹೊರಗುಳಿದಿದ್ದ ರೋನಿ ಬರ್ನ್ಸ್ ಹಾಗೂ ಡಾಮ್​ ಬೆಸ್​ ತಂಡಕ್ಕೆ ಮರಳಿದ್ದಾರೆ. ಸೌತಾಂಪ್ಟನ್ ಏಜಸ್​ ಬೌಲ್​ನಲ್ಲಿ ​ಬಯೋ ಸೆಕ್ಯೂರ್ ವಾತಾವರಣದಲ್ಲಿ ಮೊದಲ ಟೆಸ್ಟ್​ ನಡೆಯಲಿದೆ. ಪ್ರೇಕ್ಷಕರಿಲ್ಲದೆ ಮೊದಲ ಬಾರಿಗೆ ಟೆಸ್ಟ್​ ಪಂದ್ಯ ನಡೆಯಲಿದೆ. ಎರಡು ಮತ್ತು 3ನೇ ಪಂದ್ಯ ಮ್ಯಾಂಚೆಸ್ಟರ್​ನಲ್ಲಿ ಜುಲೈ 16-20 ಹಾಗೂ ಜುಲೈ 24ರಿಂದ 28ರವರೆಗೆ ನಡೆಯಲಿದೆ.

ಇಂಗ್ಲೆಂಡ್​ ತಂಡ :ಬೆನ್​ಸ್ಟೋಕ್ಸ್​(ನಾಯಕ), ಜೇಮ್ಸ್​ ಆ್ಯಂಡರ್ಸನ್​, ಜೋರ್ಫರಾ ಆರ್ಚರ್​,ಡೊಮೆನಿಕ್​ ಬೆಸ್​, ಸ್ಟುವರ್ಟ್​ ಬ್ರಾಡ್​, ರೋನಿ ಬರ್ನ್ಸ್​, ಜೋಸ್​ ಬಟ್ಲರ್​, ಜಾಕ್​ ಕ್ರೇವ್ಲೀ,ಜೋ ಡೆನ್ಲಿ, ಒಲ್ಲಿ ಪೋಪ್​, ಡಾಮ್​ ಸಿಬ್ಲಿ, ಕ್ರಿಸ್​ ವೋಕ್ಸ್​, ಮಾರ್ಕ್​ ವುಡ್​.

ABOUT THE AUTHOR

...view details