ಕರ್ನಾಟಕ

karnataka

ETV Bharat / sports

ಐಪಿಎಲ್‌ ಹರಾಜು ಪಟ್ಟಿ ಸೇರಿದ ವಿಲ್‌ ಜಾಕ್ಸ್‌: ಆಂಗ್ಲರ ನಾಡಿನ ಈ ಯುವಿ ಯಾರು? - ಐಪಿಎಲ್​​ನಲ್ಲಿ ವಿಲ್​ ಜಾಕ್ಸ್​

ಇತ್ತೀಚೆಗೆ ನಡೆದ ಟಿ10 ಟೂರ್ನಿ ಸದ್ಯ ವಿಲ್​ ಜಾಕ್ಸ್​​ರನ್ನು ಐಪಿಎಲ್​ವರೆಗೆ ಕರೆತಂದಿದೆ. ಬಲಗೈ ಆಟಗಾರ ಜಾಕ್ಸ್​ ಆಫ್​ ಸ್ಪಿನ್ ಬೌಲಿಂಗ್ ಸಹ ಮಾಡಬಲ್ಲರು.

England County hero Will Jacks keen making IPL debut
ವಿಲ್ ಜಾಕ್ಸ್

By

Published : Dec 12, 2019, 2:58 PM IST

ಹೈದರಾಬಾದ್:ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ 13ನೇ ಅವೃತ್ತಿಯ ಐಪಿಎಲ್ ಆಟಗಾರರ ಹರಾಜು ಇದೇ 19ರಂದು ನಡೆಯಲಿದೆ. ಫ್ರಾಂಚೈಸಿಗಳ ಬೇಡಿಕೆ ಮೇರೆಗೆ ಹೊಸದಾಗಿ ಹರಾಜಿನ ಪಟ್ಟಿ ಸೇರಿರುವ ಬ್ಯಾಟ್ಸ್​ಮನ್ ವಿಲ್ ಜಾಕ್ಸ್​ ಉಳಿದ ಆಟಗಾರರಿಗಿಂತ ಹೆಚ್ಚು ಗಮನ ಸೆಳೆಯುತ್ತಿದ್ದಾರೆ.

21 ವರ್ಷದ ವಿಲ್​ ಜಾಕ್ಸ್​ ಇಂಗ್ಲೆಂಡಿನ ಕೌಂಟಿ ಟೂರ್ನಿಯಲ್ಲಿ ಚಿರಪರಿಚಿತ ಹೆಸರು. 2018ರ ಮೇ 18ರಂದು ಸರ್ರೆ ಪರ ಆಡುವ ಮೂಲಕ ಮೊದಲ ದರ್ಜೆ ಕ್ರಿಕೆಟ್​​ಗೆ ಎಂಟ್ರಿ ಕೊಟ್ಟಿದ್ದರು.

ಐಪಿಎಲ್ 2020: ಹರಾಜಿಗೆ 24 ಹೊಸ ಆಟಗಾರರ ಎಂಟ್ರಿ...!

ಅದೇ ವರ್ಷದ ಜುಲೈನಲ್ಲಿ ಸರ್ರೆ ಪರ ಟಿ20 ಪಂದ್ಯಕ್ಕೂ ಪದಾರ್ಪಣೆ ಮಾಡಿದ್ದರು. ಆದರೆ ಇತ್ತೀಚೆಗೆ ನಡೆದ ಟಿ10 ಟೂರ್ನಿ ಸದ್ಯ ವಿಲ್​ ಜಾಕ್ಸ್​​ರನ್ನು ಐಪಿಎಲ್​ವರೆಗೆ ಕರೆತಂದಿದೆ. ಬಲಗೈ ಆಟಗಾರ ಜಾಕ್ಸ್​ ಆಫ್​ ಸ್ಪಿನ್ನರ್ ಸಹ ಹೌದು.

ವಿಲ್ ಜಾಕ್ಸ್

ಯುವಿ ದಾಖಲೆ ಸರಿಗಟ್ಟಿದ್ದ ಜಾಕ್ಸ್​!

ಭಾರತೀಯ ಕ್ರಿಕೆಟಿಗರಿಗೆ ವಿಲ್ ಜಾಕ್ಸ್ ಅಪರಿಚಿತ ಹೆಸರು. ಆದರೆ ಇದೇ ಆಟಗಾರ ಟಿ10 ಟೂರ್ನಿಯಲ್ಲಿ ಲಂಕಾಶೈರ್ ವಿರುದ್ಧ 25 ಎಸೆತಕ್ಕೆ ಆಕರ್ಷಕ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಈ ಇನ್ನಿಂಗ್ಸ್​ನಲ್ಲಿ ವಿಲ್ ಜಾಕ್ಸ್​ ಟೀಂ ಇಂಡಿಯಾದ ಯುವರಾಜ್​ ಸಿಂಗ್​​ರಂತೆ ಆರು ಎಸೆತಕ್ಕೆ ಆರು ಸಿಕ್ಸರ್ ಬಾರಿಸಿ ಸುದ್ದಿಯಾಗಿದ್ದರು.

ಇಂಗ್ಲೆಂಡ್ U-19 ತಂಡದಲ್ಲಿ ವಿಲ್​ ಜಾಕ್ಸ್​ ಆರು ಪಂದ್ಯವನ್ನಾಡಿದ್ದರು. ಒಂದು ಮ್ಯಾಚ್​​ನಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. 2018ರ ರಾಯಲ್ ಲಂಡನ್ ಏಕದಿನ ಕಪ್​​ನಲ್ಲಿ ಗ್ಲೌಸೆಸ್ಟರ್​ಶೈರ್ ವಿರುದ್ಧ 121 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದಿದ್ದರು.

ABOUT THE AUTHOR

...view details