ಲಂಡನ್: ಐಸಿಸಿ ಏಕದಿನ ವಿಶ್ವಕಪ್ ಫೈನಲ್ನಲ್ಲಿ ನಾವು ವಿಶ್ವಕಪ್ ಪ್ರಶಸ್ತಿ ಗೆಲುವಿನಲ್ಲಿ ಐಸಿಸಿ ನೀಡಿರುವ ನಿಯಮ ನ್ಯಾಯ ಸಮ್ಮತವಾಗಿಲ್ಲ ಎಂದು ಇಂಗ್ಲೆಂಡ್ ತಂಡದ ಕ್ಯಾಪ್ಟನ್ ಇಯಾನ್ ಮಾರ್ಗನ್ ಹೇಳಿಕೆ ನೀಡಿದ್ದಾರೆ.
ಫೈನಲ್ನಲ್ಲಿ ಇಂಗ್ಲೆಂಡ್-ನ್ಯೂಜಿಲ್ಯಾಂಡ್ ತಂಡ ಮುಖಾಮುಖಿಯಾಗಿದ್ದವು. ಈ ವೇಳೆ ಕಿವೀಸ್ ನೀಡಿದ್ದ 241ರನ್ಗಳ ಟಾರ್ಗೆಟ್ ಬೆನ್ನತ್ತಿದ್ದ ಇಂಗ್ಲೆಂಡ್ ಕೂಡ 241ರನ್ಗಳಿಕೆ ಮಾಡಿತ್ತು. ಈ ವೇಳೆ ಸೂಪರ್ ಓವರ್ನಲ್ಲೂ ಪಂದ್ಯ ಡ್ರಾ ಆಗಿತ್ತು, ಈ ವೇಳೆ ಐಸಿಸಿ ಬೌಂಡರಿ ಆಧಾರದ ಮೇಲೆ ಇಂಗ್ಲೆಂಡ್ ಗೆಲುವು ಎಂದು ಘೋಷಣೆ ಮಾಡಿತ್ತು. ಈ ನಿಯಮದ ವಿರುದ್ಧ ಅನೇಕರು ಅಸಮಾಧಾನ ಹೊರಹಾಕಿದ್ದರು. ಇದೀಗ ಇಂಗ್ಲೆಂಡ್ ಕ್ಯಾಪ್ಟನ್ ಕೂಡ ಇದೇ ವಿಷಯದ ಬಗ್ಗೆ ಮಾತನಾಡಿದ್ದಾರೆ.