ಲಂಡನ್: ಇಂಗ್ಲೆಂಡ್ ತಂಡದ ಬ್ಯಾಟ್ಸ್ಮನ್ ಜೇಮ್ಸ್ ವಿನ್ಸ್ಗೆ ಕೋವಿಡ್ 19 ದೃಢಪಟ್ಟಿದ್ದು, ಮುಂಬರುವ ಪಿಎಸ್ಎಲ್ ನಲ್ಲಿ ಭಾಗವಹಿಸುವುದು ಅನುಮಾನ ಎನ್ನಲಾಗುತ್ತಿದೆ. ಪ್ರಸ್ತುತ ವಿನ್ಸ್ಗೆ ಯಾವುದೇ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ತಕ್ಷಣ ಅವರು 2ನೇ ಟೆಸ್ಟ್ಗೆ ಒಳಗಾಗಿದ್ದಾರೆ. ಆದರೂ ಮುಂದಿನ 10 ದಿನಗಳ ಕಾಲ ಅವರು ಸೆಲ್ಫ್ ಐಸೊಲೇಶನ್ಗೆ ಒಳಗಾಗುಲಿದ್ದಾರೆ ಎಂದು ವರದಿಯಾಗಿದೆ.
ಇಂಗ್ಲೆಂಡ್ ಬ್ಯಾಟ್ಸ್ಮನ್ ಜೇಮ್ಸ್ ವಿನ್ಸ್ಗೆ ಕೋವಿಡ್ 19 ದೃಢ
ಪ್ರಸ್ತುತ ವಿನ್ಸ್ಗೆ ಯಾವುದೇ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ತಕ್ಷಣ ಅವರು 2ನೇ ಟೆಸ್ಟ್ಗೆ ಒಳಗಾಗಿದ್ದಾರೆ. ಆದರೂ ಮುಂದಿನ 10 ದಿನಗಳ ಕಾಲ ಅವರು ಸೆಲ್ಫ್ ಐಸೊಲೇಶನ್ಗೆ ಒಳಗಾಗುಲಿದ್ದಾರೆ ಎಂದು ವರದಿಯಾಗಿದೆ.
ನವೆಂಬರ್ 14 ರಿಂದ ಆರಂಭವಾಗಲಿರುವ ಪಿಎಸ್ಎಲ್ ಪ್ಲೇ ಆಫ್ಸ್ ಪಂದ್ಯಗಲ್ಲಿ ವಿನ್ಸ್ ಅವರು ಮುಲ್ತಾನ್ ಸುಲ್ತಾನ್ ತಂಡದ ಪರವಾಗಿ ವಿದೇಶಿ ಆಟಗಾರನಾಗಿ ಆಡಬೇಕಿತ್ತು. ವಿನ್ಸ್ ಕೋವಿಡ್ 19ನಿಂದ ಲೀಗ್ ಸ್ತಗಿತಗೊಳ್ಳುವ ಮುನ್ನ 5 ಇನ್ನಿಂಗ್ಸ್ಗಳಲ್ಲಿ 155 ರನ್ಗಳಿಸಿದ್ದರು. ವರದಿಗಳ ಪ್ರಕಾರ ವಿನ್ಸ್ ಬದಲಿಗೆ ಇಂಗ್ಲೆಂಡ್ನ ಜೋ ಡೆನ್ಲಿ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಭಾನುವಾರವಷ್ಟೇ ಪಿಎಸ್ಎಲ್ನಲ್ಲಿ ಆಡಬೇಕಿದ್ದ ಬಾಂಗ್ಲಾದೇಶದ ಆಲ್ರೌಂಡರ್ ಮಹಮದುಲ್ಲಾ ಕೂಡ ಕೋವಿಡ್ ಸೋಂಕು ತಗುಲಿದ ಹಿನ್ನಲೆ ಟೂರ್ನಿಯಿಂದ ಹೊರಬಿದ್ದಿದ್ದರು.