ಹೈದರಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 2-1 ಅಂತರದಲ್ಲಿ ಗೆಲುವು ದಾಖಲು ಮಾಡಿದ್ದು, ಇದೀಗ ಪಾಕ್ ವಿರುದ್ಧ ಆರಂಭಗೊಳ್ಳಲಿರುವ ಕ್ರಿಕೆಟ್ ಸರಣಿಯಲ್ಲಿ ಇದೇ ತಂಡ ಮುಂದುವರೆಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.
ಮುಂದಿನ ವಾರ ಪಾಕ್ ವಿರುದ್ಧ ಆರಂಭಗೊಳ್ಳಲಿರುವ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಯಾವುದೇ ರೀತಿಯ ತಂಡ ಬದಲಾವಣೆ ಮಾಡದೇ ಘೋಷಣೆ ಮಾಡಲಾಗಿದೆ.
ತಂಡ ಇಂತಿದೆ:
ಜೋ ರೂಟ್(ಕ್ಯಾಪ್ಟನ್), ಜೆಮ್ಸ್ ಆಂಡರ್ಸನ್, ಜೋಫರ್ ಆರ್ಚರ್, ಡೊಮಿನಿಕ್ ಬೆಸ್, ಸ್ಟುವರ್ಟ್ ಬ್ರಾಡ್, ರೂರಿ ಬರ್ನ್ಸ್, ಜೋಸ್ ಬಟ್ಲರ್, ಜಾಕ್ ಕ್ರಿವಿಲಿ, ಸ್ಯಾಮ್ ಕರ್ರನ್, ಓಲಿ ಪೊಪ್, ಡೊಮಿ ಸಿಬ್ಲಿ, ಬೆನ್ ಸ್ಟೋಕ್ಸ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್.
ಮೀಸಲು ಆಟಗಾರರು:
ಜೆಮ್ಸ್ ಬ್ರಾಸಿ, ಬೆನ್ ಫೋಕ್ಸ್, ಜಾಕ್ ಲೆಕ್, ಡಾನ್ ಲಾವರೆನ್ಸ್
ಕಳೆದ ಎರಡು ಟೆಸ್ಟ್ ಪಂದ್ಯಗಳಿಂದ 16 ವಿಕೆಟ್ ಪಡೆದುಕೊಂಡು ಸ್ಟುವರ್ಟ್ ಬ್ರಾಡ್ ಮಿಂಚಿದ್ದು, ಕೊನೆ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲೇ ಕ್ರಿಸ್ ವೋಕ್ಸ್ ಐದು ವಿಕೆಟ್ ಪಡೆದು ಮಿಂಚಿದ್ದಾರೆ. ಪಾಕ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳು ಆಯೋಜನೆಗೊಂಡಿದ್ದು, ಎರಡನೇ ಹಾಗೂ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಕೆಲವು ಬದಲಾವಣೆ ಮಾಡುವ ಸಾಧ್ಯತೆ ಇದೆ.