ಲಂಡನ್: ಜುಲೈ 30 ರಿಂದ ಐರ್ಲೆಂಡ್ ವಿರುದ್ಧ ಆರಂಭವಾಗಲಿರುವ ವಿಶ್ವಕಪ್ ಸೂಪರ್ ಲೀಗ್ನ ಉದ್ಘಾಟನಾ ಸರಣಿಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ 14 ಸದಸ್ಯರ ತಂಡವನ್ನು ಪ್ರಕಟಿಸಿದೆ.
ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಕ್ರಿಸ್ ವೋಕ್ಸ್ ಹಾಗೂ ಜೋ ರೂಟ್ ವೆಸ್ಟ್ ಹಾಗೂ ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿಯಲ್ಲಿರುವುದರಿಂದ ಇಸಿಬಿ ಕೆಲವು ಆಟಗಾರರನ್ನು ಮರಳಿ ತಂಡಕ್ಕೆ ಸೇರ್ಪಡೆಗೊಳಿಸಿದೆ.
ಎಂದಿನಂತೆ ಇಯೋನ್ ಮಾರ್ಗನ್ ತಂಡವನ್ನು ಮುನ್ನಡೆಸಲಿದ್ದಾರೆ. ಬಟ್ಲರ್ ಅನುಪಸ್ಥಿತಿಯಲ್ಲಿ ಉಪನಾಯಕತ್ವವನ್ನು ಮೊಯಿನ್ ಅಲಿ ಪಡೆದಿದ್ದಾರೆ. ಟೆಸ್ಟ್ ತಂಡದಿಂದ ಹೊರ ಬಿದ್ದಿರುವ ಜಾನಿ ಬೈರ್ಸ್ಟೋವ್, ಜೇಮ್ಸ್ ವಿನ್ಸ್ ಏಕದಿನ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಸ್ಯಾಮ್ ಬಿಲ್ಲಿಂಗ್ಸ್ ಎರಡು ವರ್ಷದ ಬಳಿಕ ಏಕದಿನ ತಂಡಕ್ಕೆ ಮರಳಿದರೆ, ವೇಗಿ ರೀಸ್ ಟಾಪ್ಲೀ 4 ವರ್ಷಗಳ ಬಳಿಕ ಇಂಗ್ಲೆಂಡ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.