ಕರ್ನಾಟಕ

karnataka

ETV Bharat / sports

ಕ್ವಾರಂಟೈನ್ ಅವಧಿ 3 ದಿನಕ್ಕಿಳಿಸಲು ಆಸೀಸ್‌-ಇಂಗ್ಲೆಂಡ್​ ಕ್ರಿಕೆಟಿಗರಿಂದ ಬಿಸಿಸಿಐಗೆ ಮನವಿ - IPL latest news

ಯುಎಇಗೆ ಆಗಮಿಸಿದ ನಂತರ ಆರು ದಿನಗಳ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಅಂದರೆ ನಾವು ಮೊದಲ ಪಂದ್ಯದಿಂದ ಆಡಲು 6 ದಿನಗಳ ಮುಂಚಿತವಾಗಿ ಅಲ್ಲಿರಬೇಕು. ಆದರೆ, ಅದು ಸಾಧ್ಯವಾಗುತ್ತಿಲ್ಲ..

ಕ್ವಾರಂಟೈನ್ 3 ದಿನಗಳಿಗೆ ಇಳಿಸುವಂತೆ ಆಸ್ಟ್ರೇಲಿಯಾ-ಇಂಗ್ಲೆಂಡ್​ ಕ್ರಿಕೆಟಿಗರಿಂದ ಬಿಸಿಸಿಐಗೆ ಮನವಿ
ಬಿಸಿಸಿಐ ಐಪಿಎಲ್​

By

Published : Sep 15, 2020, 8:43 PM IST

ಮುಂಬೈ: ಪ್ರಸ್ತುತ ಏಕದಿನ ಸರಣಿಯಲ್ಲಿ ತೊಡಗಿಸಿಕೊಂಡಿರುವ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​ ಆಟಗಾರರು ಯುಎಇಗೆ ಆಗಮಿಸಿದ ವೇಳೆ ಕ್ವಾರಂಟೈನ್​ ಅವಧಿ ಕಡಿತಗೊಳಿಸುವಂತೆ ಮನವಿ ಮಾಡಿದ್ದಾರೆ.

ಸೆಪ್ಟೆಂಬರ್‌ 19ರಿಂದ ಶ್ರೀಮಂತ ಕ್ರಿಕೆಟ್​ ಲೀಗ್ ಆರಂಭಗೊಳಲ್ಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್ ಹಾಗೂ ರನ್ನರ್ ಅಪ್ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಆಡಲಿವೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​ ತಂಡಗಳ ನಡುವಿನ 3ನೇ ಏಕದಿನ ಪಂದ್ಯ ಸೆಪ್ಟೆಂಬರ್​ 16ರಂದು ನಡೆಯಲಿದೆ. ಅವರು ಪಂದ್ಯವನ್ನು ಮುಗಿಸಿಕೊಂಡು ಐಪಿಎಲ್​ಗಾಗಿ 17ರಂದು ಯುಎಇಗೆ ಪ್ರಯಾಣ ಬೆಳೆಸಲಿದ್ದಾರೆ.

ಆದರೆ, ಯುಎಇನ ಪ್ರಸ್ತುತ ಕ್ವಾರಂಟೈನ್​ ನಿಯಮಗಳ ಪ್ರಕಾರ ವಿದೇಶಗಳಿಂದ ಬರುವವರು 6 ದಿನಗಳ ಕಾಲ ಕ್ವಾರಂಟೈನ್​ನಲ್ಲಿರಬೇಕಾಗಿದೆ. ಜೊತೆಗೆ ಈ ವೇಳೆ 2 ಕೋವಿಡ್​-19 ಟೆಸ್ಟ್​ಗಳನ್ನು ಸಹ ಎದುರಿಸಬೇಕಾಗಿದೆ. ಆದರೆ, ಬಯೋಬಬಲ್​ನಲ್ಲಿರುವ 2 ದೇಶಗಳ ಆಟಗಾರರು ಕ್ವಾರಂಟೈನ್​ ಅವಧಿಯನ್ನು 3 ದಿನಗಳಿಗೆ ಇಳಿಸಲು ಬಿಸಿಸಿಐಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಯುಎಇಗೆ ಆಗಮಿಸಿದ ನಂತರ ಆರು ದಿನಗಳ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಅಂದರೆ ನಾವು ಮೊದಲ ಪಂದ್ಯದಿಂದ ಆಡಲು 6 ದಿನಗಳ ಮುಂಚಿತವಾಗಿ ಅಲ್ಲಿರಬೇಕು. ಆದರೆ, ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಕ್ವಾರಂಟೈನ್​ ಅವಧಿಯನ್ನು 6ರ ಬದಲಾಗಿ ಮೂರು ದಿನಕ್ಕೆ ಇಳಿಸಿದ್ರೆ ನಾವು ಆರಂಭದ ಪಂದ್ಯದಿಂದಲೇ ಆಡುಬಹುದು ಎಂದು ಇಂಗ್ಲೆಂಡ್ ಮತ್ತು ಆಸೀಸ್‌ ಕ್ರಿಕೆಟಿಗರು ಬಿಸಿಸಿಐಗೆ ಮನವಿ ಸಲ್ಲಿಸಿದ್ದಾರೆ.

ಐಪಿಎಲ್​ನಲ್ಲಿ ಆಡಲಿರುವ ಎರಡು ದೇಶಗಳ 21 ಆಟಗಾರರು ಸೆಪ್ಟೆಂಬರ್ 17ರಂದು ಮ್ಯಾಂಚೆಸ್ಟರ್‌ನಿಂದ ದುಬೈಗೆ ಚಾರ್ಟರ್ಡ್ ಫ್ಲೈಟ್ ಮೂಲಕ ದುಬೈಗೆ ಬರಲಿದ್ದಾರೆ.

ABOUT THE AUTHOR

...view details