ಸಾತಾಂಪ್ಟನ್: ಸುದೀರ್ಘ ದಿನಗಳ ಬಳಿಕ ಮರಳಿದ ಕ್ರಿಕೆಟ್ನಲ್ಲಿ ವೆಸ್ಟ್ ಇಂಡೀಸ್ ಆತಿಥೇಯ ಇಂಗ್ಲೆಂಡ್ ವಿರುದ್ಧ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ತೋರಿದ್ದು, 114ರನ್ಗಳ ಮುನ್ನಡೆ ಪಡೆದುಕೊಂಡಿದೆ.
ಸೌತಾಂಪ್ಟನ್ನಲ್ಲಿ ಬಯೋಸೆಕ್ಯೂರ್ ತಾಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ಮೇಲುಗೈ ಸಾಧಿಸಿದೆ. ಮೊದಲ ದಿನ ಮಳೆಗೆ ಆಹುತಿಯಾದರೂ ಎರಡನೇ ದಿನ ಇಂಗ್ಲೆಂಡ್ ತಂಡವನ್ನು ಹೋಲ್ಡರ್ ಪಡೆ 204 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಯಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಜೇಸನ್ ಹೋಲ್ಡರ್(42ಕ್ಕೆ 6) ಹಾಗೂ ಶೆನಾನ್ ಗೇಬ್ರಿಯಲ್ (62ಕ್ಕೆ4) ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 204 ರನ್ಗಳಿಗೆ ಆಲೌಟ್ ಆಗಿದೆ. ಇಂಗ್ಲೆಂಡ್ ಪರ ನಾಯಕ ಬೆನ್ ಸ್ಟೋಕ್ಸ್ 43, ಜಾಸ್ ಬಟ್ಲರ್ 35 ರನ್ಗಳಿಸಿದ್ದೇ ಟಾಪ್ ಸ್ಕೋರ್ ಎನಿಸಿಕೊಂಡಿತು.