ಕರ್ನಾಟಕ

karnataka

ETV Bharat / sports

ಗೇಬ್ರಿಯಲ್​, ರೋಚ್​ ಬಿರುಗಾಳಿಯ ಮಧ್ಯೆ ಮಿಂಚಿದ ಸ್ಟುವರ್ಟ್​ ಬ್ರಾಡ್​: 369 ರನ್​ಗಳಿಗೆ ಇಂಗ್ಲೆಂಡ್​ ಆಲೌಟ್​ - test championship

ಕೆಮರ್​ ರೋಚ್​ ಹಾಗೂ ಗೇಬ್ರಿಯಲ್​ ಬೌಲಿಂಗ್​ ಅಬ್ಬರದ ನಡುವೆಯೂ ಸ್ಟುವರ್ಟ್​ ಬ್ರಾಡ್​ ಸಿಡಿಸಿದ ಸ್ಫೋಟಕ ಅರ್ಧಶತಕದ ನೆವಿನಿಂದ 111.5 ಓವರ್​ಗಳಲ್ಲಿ 369 ರನ್​ಗಳಿಸಿ ಆಲೌಟ್​ ಆಗಿದೆ. ರೋನಿ ಬರ್ನ್ಸ್​ 57,ಒಲ್ಲಿ ಪೋಪ್​ 91, ಜೋಸ್​ ಬಟ್ಲರ್​ 67 ಹಾಗೂ ಸ್ಟುವರ್ಟ್ ಬ್ರಾಡ್​ 62 ರನ್​ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.

ENG vs WI 3rd test
ENG vs WI 3rd test

By

Published : Jul 25, 2020, 6:05 PM IST

ಮ್ಯಾಂಚೆಸ್ಟರ್​: ಸರಣಿ ನಿರ್ಣಯಿಸುವ ವಿಂಡೀಸ್​ ವಿರುದ್ಧದ ಕೊನೆಯ ಟೆಸ್ಟ್​ನಲ್ಲಿ ಇಂಗ್ಲೆಂಡ್​ ತಂಡ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 369 ರನ್​ಗಳಿಸಿದೆ.

ಕೆಮರ್​ ರೋಚ್​ ಹಾಗೂ ಗೇಬ್ರಿಯಲ್​ ಬೌಲಿಂಗ್​ ಅಬ್ಬರದ ನಡುವೆಯೂ ಸ್ಟುವರ್ಟ್​ ಬ್ರಾಡ್​ ಸಿಡಿಸಿದ ಸ್ಫೋಟಕ ಅರ್ಧಶತಕದ ನೆವಿನಿಂದ 111.5 ಓವರ್​ಗಳಲ್ಲಿ 369 ರನ್​ಗಳಿಸಿ ಆಲೌಟ್​ ಆಗಿದೆ. ರೋನಿ ಬರ್ನ್ಸ್​ 57,ಒಲ್ಲಿ ಪೋಪ್​ 91, ಜೋಸ್​ ಬಟ್ಲರ್​ 67 ಹಾಗೂ ಸ್ಟುವರ್ಟ್ ಬ್ರಾಡ್​ 62 ರನ್​ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.

ಮೊದಲ ದಿನ 262ಕ್ಕೆ 4 ವಿಕೆಟ್​ ಕಳೆದುಕೊಂಡಿದ್ದ ಇಂಗ್ಲೆಂಡ್​ ಅದೇ ಮೊತ್ತಕ್ಕೆ ಒಲ್ಲಿ ಪೋಪ್​(91) ವಿಕೆಟ್​ ಕಳೆದುಕೊಂಡಿತು. ದಿನದಾರಂಭದಲ್ಲಿ ಪೋಪ್​ ವಿಕೆಟ್​ ಪಡೆದು ಶೆನಾನ್​ ಗೇಬ್ರಿಯಲ್​ ವಿಂಡೀಸ್​ಗೆ ಮೇಲುಗೈ ತಂದುಕೊಟ್ಟರು. ನಂತರ ಕೆಮರ್​ ರೋಚ್​ ಜೋಸ್​ ಬಟ್ಲರ್​(67),ಕ್ರಿಸ್​ ವೋಕ್ಸ್​(01) ಹಾಗೂ ಜೋಫ್ರಾ ಆರ್ಚರ್​(3) ವಿಕೆಟ್​ ಪಡೆದು ಇಂಗ್ಲೆಂಡ್​ಗೆ ಆಘಾತ ನೀಡಿದರು.

ಆದರೆ 9ನೇ ವಿಕೆಟ್​ ಜೊತೆಯಾಟದಲ್ಲಿ ಒಂದಾದ ಡಾಮ್​ ಬೆಸ್​ ಹಾಗೂ ಸ್ಟುವರ್ಟ್​ ಬ್ರಾಡ್​ 75 ರನ್​ಗಳ ಜೊತೆಯಾಟ ನಡೆಸಿದರು. ಅಬ್ಬರದ ಬ್ಯಾಟಿಂಗ್​ ಪ್ರದರ್ಶನ ತೋರಿದ ಬ್ರಾಡ್​ ಕೇವಲ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅವರು ಒಟ್ಟಾರೆ 45 ಎಸೆತಗಳಲ್ಲಿ 9 ಬೌಂಡರಿ ಹಾಗೂ ಒಂದು ಸಿಕ್ಸರ್​ ಸಹಿತ 62 ರನ್​ ಸಿಡಿಸಿದರು. ನಂತರ ಬಂದ ಆ್ಯಂಡರ್ಸನ್​ 11 ರನ್​ಗಳಿಸಿ ಔಟಾಗುವುದರೊಂದಿಗೆ ಇಂಗ್ಲೆಂಡ್​ ಇನ್ನಿಂಗ್ಸ್​ಗೆ ತೆರೆ ಬಿದ್ದಿತು. ಡಾಮ್​ ಬೆಸ್​ 18 ರನ್​ಗಳಿಸಿ ಔಟಾಗದೆ ಉಳಿದುಕೊಂಡರು.

ಇನ್ನು ಮೊದಲ ಸೆಸೆನ್​ನಲ್ಲಿ ಮಾರಕ ಬೌಲಿಂಗ್​ ದಾಳಿ ನಡೆಸಿದ ಗೇಬ್ರಿಯಲ್​ 77ಕ್ಕೆ 2, ಕೆಮರ್​ ರೋಚ್​ 71ಕ್ಕೆ 4 , ರಾಸ್ಟನ್​ ಚೇಸ್​36ಕ್ಕೆ 2 ಹಾಗೂ ನಾಯಕ ಹೋಲ್ಡರ್​ 83ಕ್ಕೆ 1 ವಿಕೆಟ್​ ಪಡೆದರು.

ABOUT THE AUTHOR

...view details