ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್​ ಬಿಗಿಹಿಡಿತದಲ್ಲಿ 2ನೇ ಟೆಸ್ಟ್: ಕೂತೂಹಲ ಕೆರಳಿಸಿದ ಕೊನೆ ದಿನದ ಆಟ

ಮೊದಲ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್​ ತಂಡ 9 ವಿಕೆಟ್ ಕಳೆದುಕೊಂಡು 469 ರನ್​ಗಳನ್ನ ಕಲೆ ಹಾಕಿ ಡಿಕ್ಲೇರ್​ ಘೋಷಿಸಿಕೊಂಡಿತ್ತು. ಇದಕ್ಕುತ್ತರವಾಗಿ ವಿಂಡೀಸ್​ ತಂಡವನ್ನು 287ರನ್​ಗಳಿಗೆ ಕಟ್ಟಿ ಹಾಕಿದೆ. ಈ ಮೂಲಕ 182 ರನ್​ಗಳ ಬೃಹತ್​ ಮುನ್ನಡೆ ಸಾಧಿಸಿತು.

england vs west indies
ವೆಸ್ಟ್​ ಇಂಡೀಸ್​ ಇಂಗ್ಲೆಂಡ್​ ಟೆಸ್ಟ್

By

Published : Jul 20, 2020, 12:56 PM IST

ಮ್ಯಾಂಚೆಸ್ಟರ್​:ವೆಸ್ಟ್​ ಇಂಡೀಸ್​ ಮತ್ತು ಇಂಗ್ಲೆಂಡ್​ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್​ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ವಿಂಡೀಸ್​ ತಂಡವನ್ನು 287 ರನ್​ಗಳಿಗೆ ಆಲೌಟ್​ ಮಾಡಿರುವ ಆಂಗ್ಲಪಡೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ್ದು, ಒಟ್ಟಾರೆ 219 ರನ್​ಗಳ​ ಮುನ್ನಡೆ ಸಾಧಿಸಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್​ ತಂಡ 9 ವಿಕೆಟ್ ಕಳೆದುಕೊಂಡು 469 ರನ್​ ಕಲೆ ಹಾಕಿ ಡಿಕ್ಲೇರ್​ ಘೋಷಿಸಿಕೊಂಡಿತ್ತು. ಇದಕ್ಕುತ್ತರವಾಗಿ ವಿಂಡೀಸ್​ ತಂಡವನ್ನು 287ರನ್​ಗಳಿಗೆ ಕಟ್ಟಿ ಹಾಕಿದೆ. ಈ ಮೂಲಕ 182 ರನ್​ಗಳ ಮುನ್ನಡೆ ಸಾಧಿಸಿದೆ.

3ನೇ ದಿನದಾಟದಲ್ಲಿ 31ಕ್ಕೆ 1 ವಿಕೆಟ್​ ಕಳೆದುಕೊಂಡಿದ್ದ ವಿಂಡೀಸ್​ ನಾಲ್ಕನೇ ದಿನ ಮೊದಲೆರಡು ಸೆಸೆನ್​ನಲ್ಲಿ ಅದ್ಭುತ ಆಟವನ್ನಾಡಿತ್ತು. 242 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡಿದ್ದ ವಿಂಡೀಸ್​ ಪಂದ್ಯವನ್ನು ಸುಲಭವಾಗಿ ಡ್ರಾ ಸಾಧಿಸಿ ಸರಣಿ ಮುನ್ನಡೆ ಉಳಿಸಿಕೊಳ್ಳುವ ಆಲೋಚನೆಯಲ್ಲಿತ್ತು. ಆದರೆ, ಇಂಗ್ಲೆಂಡ್​ ಬೌಲರ್​ಗಳ ದಾಳಿಗೆ ಸಿಲುಕಿ 287 ರನ್​ಗಳಿಗೆ ಸರ್ವಪತನ ಕಂಡಿತು.

3ನೇ ದಿನ ನೈಟ್​ ವಾಚ್​ಮನ್ ಆಗಿದ್ದ ಅಲ್ಜಾರಿ ಜೋಸೆಫ್​ 32, ಕ್ರೈಗ್​ ಬ್ರಾತ್​ವೇಟ್​ 75 ರನ್​ಗಳಿಸಿದರೆ, ಶಾಯ್​ ಹೋಪ್​ 25 ರನ್​ಗಳಿಸಿ ಮತ್ತೊಮ್ಮೆ ವಿಫಲರಾದರು. ಶಮರ್ಹ ಬ್ರೂಕ್ಸ್​ 68, ರಾಸ್ಟನ್​ ಚೇಸ್​ 51 ರನ್​ಗಳಿಸಿದರು. ಆದರೆ, ನಂತರ ಬಂದ ಯಾವುದೇ ಬ್ಯಾಟ್ಸ್​ಮನ್​ ಎರಡಂಕಿ ಮೊತ್ತ ದಾಟಲಿಲ್ಲ. ಕಳೆದ ಪಂದ್ಯದ ಹೀರೋ ಬ್ಲಾಕ್​ವುಡ್​ ಹಾಗೂ ಡೋರಿಚ್​ ಶೂನ್ಯ ಸಂಪಾದನೆ ಮಾಡಿದರೆ, ನಾಯಕ ಹೋಲ್ಡರ್​ 2, ಗೇಬ್ರಿಯಲ್​ ಕೂಡ ಡಕ್​ ಔಟ್​ ಆದರು. 242 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡಿದ್ದ ವಿಂಡೀಸ್ 45 ರನ್​ಗಳಿಸುವಷ್ಟರಲ್ಲಿ ತನ್ನ 6 ವಿಕೆಟ್​ ಕಳೆದುಕೊಂಡಿತು.

ಇಂಗ್ಲೆಂಡ್​ ಪರ ಬ್ರಾಡ್​ ಹಾಗೂ ಕ್ರಿಸ್​ ವೋಕ್ಸ್​ ತಲಾ ಮೂರು ವಿಕೆಟ್, ಸ್ಯಾಮ್​ ಕರನ್​ 2 ಹಾಗೂ ಡಾಮ್​ ಬೆಸ್​ ಮತ್ತು ಸ್ಟೋಕ್ಸ್​ ತಲಾ ಒಂದು ವಿಕೆಟ್​ ಪಡೆದರು.

ಇನ್ನು 182 ರನ್​ಗಳ ಮೊದಲ ಇನ್ನಿಂಗ್ಸ್​ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್​ 2 ವಿಕೆಟ್​ ಕಳೆದುಕೊಂಡು 37 ರನ್​ಗಳಿಸಿದೆ. ಇನ್ನು ಒಂದು ದಿನದ ಆಟ ಬಾಕಿಯಿದ್ದು ಈ ಪಂದ್ಯವೂ ಕೂಡ ಕಳೆದ ಪಂದ್ಯದಂತೆ ರೋಚಕ ಹಂತ ತಲುಪಲಿದೆ.

ABOUT THE AUTHOR

...view details