ಲಂಡನ್: ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಪ್ರಾರಂಭದ ಸಮಯವನ್ನು ಹವಾಮಾನ ವೈಪರಿತ್ಯದ ಕಾರಣ ಬದಲಾವಣೆ ಮಾಡಲು ಕ್ರಿಸ್ ಬ್ರಾಡ್ ನೇತೃತ್ವದದಲ್ಲಿ ನಡೆದ ಸಭೆಯಲ್ಲಿ ಇಸಿಬಿ, ಪಿಸಿಬಿ ಮತ್ತು ಪ್ರಸಾರಕರು ಸೇರಿದಂತೆ ವಿವಿಧ ಪಾಲುದಾರರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
2ನೇ ಪಂದ್ಯದ ವೇಳೆ ಮಳೆ ಹಾಗೂ ಮಂದಬೆಳಕಿನ ಕಾರಣ ಹೆಚ್ಚು ಸಮಯ ವ್ಯರ್ಥವಾಗಿದ್ದರಿಂದ 3ನೇ ಪಂದ್ಯದಲ್ಲಿ ಬೆಳಿಗ್ಗೆ 11 ಗಂಟೆಯ ಬದಲಾಗಿ 10:30ಕ್ಕೆ ಪಂದ್ಯವನ್ನು ಪ್ರಾರಂಭಿಸಲು ಎರಡು ಕ್ರಿಕೆಟ್ ಬೋರ್ಡ್ಗಳು ಒಪ್ಪಿಗೆ ಸೂಚಿಸಿವೆ ಎಂದು ಐಸಿಸಿ ತಿಳಿಸಿದೆ.
ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಆಗಸ್ಟ್ 21, ಶುಕ್ರವಾರದಿಂದ ಸೌತಾಂಪ್ಟನ್ನಲ್ಲಿ ಆರಂಭವಾಗಲಿದೆ.