ಕರ್ನಾಟಕ

karnataka

ETV Bharat / sports

ಪಾಕಿಸ್ತಾನ ತಂಡವನ್ನು 273ಕ್ಕೆ ಆಲೌಟ್ ಮಾಡಿ ಫಾಲೋಆನ್​ ಹೇರಿದ ಇಂಗ್ಲೆಂಡ್​ - ಟೆಸ್ಟ್​ ಚಾಂಪಿಯನ್ ್ಶಿಪ್​

ಇಂಗ್ಲೆಂಡ್​ ತಂಡ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 583 ರನ್​ಗಳಿಸಿ ಡಿಕ್ಲೇರ್​ ಘೋಷಿಸಿಕೊಂಡಿತ್ತು. ಇದಕ್ಕುತ್ತರವಾಗಿ ಪಾಕಿಸ್ತಾನ ತಂಡ 273 ರನ್​ಗಳಿಗೆ ಆಲೌಟ್​ ಆಗಿದ್ದು, 310 ರನ್​ಗಳ ಹಿನ್ನಡೆ ಪಡೆದಿದೆ. ಬೃಹತ್​ ಮುನ್ನಡೆಯ ಲಾಭ ಪಡೆದಿರುವ ಇಂಗ್ಲೆಂಡ್​ ಫಾಲೋ ಆನ್​ ಹೇರಿದ್ದು, 4ನೇ ದಿನ ಮತ್ತೆ ಪಾಕ್​ ಬ್ಯಾಟಿಂಗ್​ ಆರಂಭಿಸಲಿದೆ.

ಇಂಗ್ಲೆಂಡ್​ ಪಾಕಿಸ್ತಾನ ಟೆಸ್ಟ್​
ಇಂಗ್ಲೆಂಡ್​ ಪಾಕಿಸ್ತಾನ ಟೆಸ್ಟ್​

By

Published : Aug 24, 2020, 12:22 PM IST

ಸೌತಾಂಪ್ಟನ್​:ನಾಯಕ ಅಜರ್​ ಅಲಿ ಶತಕದ ಹೊರತಾಗಿಯೂ ಪಾಕಿಸ್ತಾನ ತಂಡ ಕೇವಲ 273 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಫಾಲೋ ಆನ್​ಗೆ ತುತ್ತಾಗಿದೆ.

ಇಂಗ್ಲೆಂಡ್​ ತಂಡ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 583 ರನ್​ ಗಳಿಸಿ ಡಿಕ್ಲೇರ್​ ಘೋಷಿಸಿಕೊಂಡಿತ್ತು. ಇದಕ್ಕುತ್ತರವಾಗಿ ಪಾಕಿಸ್ತಾನ ತಂಡ 273 ರನ್​ಗಳಿಗೆ ಆಲೌಟ್​ ಆಗಿದ್ದು, 310 ರನ್​ಗಳ ಹಿನ್ನಡೆ ಪಡೆದಿದೆ. ಬೃಹತ್​ ಮುನ್ನಡೆಯ ಲಾಭ ಪಡೆದಿರುವ ಇಂಗ್ಲೆಂಡ್​ ಫಾಲೋ ಆನ್​ ಹೇರಿದ್ದು, 4ನೇ ದಿನ ಮತ್ತೆ ಪಾಕ್​ ಬ್ಯಾಟಿಂಗ್​ ಆರಂಭಿಸಲಿದೆ.

3ನೇ ದಿನ ಪಂದ್ಯ ಆರಂಭವಾದಾಗ 24ಕ್ಕೆ 3 ವಿಕೆಟ್​ ಕಳೆದುಕೊಂಡಿದ್ದ ಪಾಕಿಸ್ತಾನ 30 ರನ್​ಗಳಾಗುವಷ್ಟರಲ್ಲಿ ಅಸಾದ್​ ಶಫೀಕ್​(5) ವಿಕೆಟ್​ ಕಳೆದುಕೊಂಡಿತು.

ಈ ಹಂತದಲ್ಲಿ ನಾಯಕ ಅಜರ್​ ಅಲಿ ಜೊತೆಗೂಡಿದ ಫವಾದ್​ ಅಹ್ಮದ್​(21) 5ನೇ ವಿಕೆಟ್​ಗೆ 45 ರನ್​ ಸೇರಿಸಿದರು. 74 ಎಸೆತಗಳಲ್ಲಿ 21 ರನ್​ ಗಳಿಸಿದ್ದ ಫವಾದ್​ ಅಲಮ್​ ಡಾಮ್​ ಬೆಸ್​ಗೆ ವಿಕೆಟ್​ ಒಪ್ಪಿಸಿದರು. ಆದರೆ ವಿಕೆಟ್​ ಕೀಪರ್​ ರಿಜ್ವಾನ್​ (53) ಹಾಗೂ ಅಜರ್​ 6ನೇ ವಿಕೆಟ್​ಗೆ 138 ರನ್​ಗಳ ಜೊತೆಯಾಟ ನೀಡುವ ಮೂಲಕ ಪಾಕ್​ ತಂಡಕ್ಕೆ ಚೇತರಿಕೆ ನೀಡಿದರು.

113 ಎಸೆತಗಳಲ್ಲಿ 1 ಸಿಕ್ಸರ್​ ಹಾಗೂ 5 ಬೌಂಡರಿ ಸಹಿತ 53 ರನ್ ​ಗಳಿಸಿದ್ದ ರಿಜ್ವಾನ್​ ಔಟ್​ ಆಗುತ್ತಿದ್ದಂತೆ ಪಾಕ್​ ಪತನದತ್ತ ಸಾಗಿತು. ಯಾಸಿರ್​ ಶಾ(20) ಹಾಗೂ ಶಾಹೀನ್​ ಅಫ್ರಿದಿ(3)ಯನ್ನು ಬ್ರಾಡ್​ ಪೆವಿಲಿಯನ್​ಗಟ್ಟಿದರೆ, ಅಬ್ಬಾಸ್ ರನ್​ಔಟ್​ ಆದರು. ನಸೀಮ್​(0) ಆ್ಯಂಡರ್ಸನ್​ಗೆ 5ನೇ ಬಲಿಯಾಗುವುದರೊಂದಿಗೆ ಪಾಕ್​ ಇನ್ನಿಂಗ್ಸ್​ಗೆ ತೆರೆ ಬಿದ್ದಿತು.

ಏಕಾಂಗಿ ಹೋರಾಟ ನಡೆಸಿದ ಅಜರ್​ ಅಲಿ 272 ಎಸೆತಗಳಲ್ಲಿ 21 ಬೌಂಡರಿ ಸಹಿತ 141 ರನ್​ ಗಳಿಸಿ ಔಟಾಗದೆ ಉಳಿದುಕೊಂಡರು.​

ಇಂಗ್ಲೆಂಡ್​ ಪರ ಅನುಭವಿ ವೇಗಿ ಜೇಮ್ಸ್​ ಆ್ಯಂಡರ್ಸನ್​ 56 ರನ್​ ನೀಡಿ ತಮ್ಮ 29ನೇ 5 ವಿಕೆಟ್​ ಗೊಂಚಲು ಪಡೆದರು. ಇವರಿಗೆ ಸಾಥ್ ನೀಡಿದ ಸ್ಟುವರ್ಟ್​ ಬ್ರಾಡ್​ 2 ವಿಕೆಟ್​, ಕ್ರಿಸ್​ ವೋಕ್ಸ್​ ಮತ್ತು ಡಾಮ್​ ಬೆಸ್​ ತಲಾ ಒಂದು ವಿಕೆಟ್​ ಪಡೆದರು.

ಇನ್ನೂ ಎರಡು ದಿನಗಳ ಆಟ ಬಾಕಿ ಉಳಿದಿದ್ದು, ಇಂಗ್ಲೆಂಡ್​ ತಂಡ ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚಿದೆ.

ABOUT THE AUTHOR

...view details