ಸೌತಾಂಪ್ಟನ್: ಇಂಗ್ಲೆಂಡ್ ತಂಡದ ಸ್ಪಿನ್ನರ್ ಆದಿಲ್ ರಶೀದ್ ಐರ್ಲೆಂಡ್ ವಿರುದ್ಧ 3 ವಿಕೆಟ್ ಪಡೆಯುವ ಮೂಲಕ ಏಕದಿನ ಕ್ರಿಕೆಟ್ನಲ್ಲಿ 150 ವಿಕೆಟ್ ಪೂರೈಸಿದರು. ಈ ಮೂಲಕ ಈ ಸಾದನೆ ಮಾಡಿದ ಮೊದಲ ಇಂಗ್ಲೀಷ್ ಸ್ಪಿನ್ ಬೌಲರ್ ಎನಿಸಿಕೊಂಡರು.
ರಶೀದ್ ಎರಡನೇ ಪಂದ್ಯದಲ್ಲಿ ಐರ್ಲೆಂಡ್ನ ಹ್ಯಾರಿ ಟೆಕ್ಟರ್ (28), ಲಾರ್ಕನ್ ಟಕ್ಕರ್ (21), ಮತ್ತು ಕೆವಿನ್ ಒ'ಬ್ರಿಯೆನ್ (3) ರವರ ವಿಕೆಟ್ ಪಡೆಯುವ ಮೂಲಕ 50 ಓವರ್‌ಗಳ ಮಾದರಿಯಲ್ಲಿ 150 ವಿಕೆಟ್ ಪೂರ್ಣಗೊಳಿಸಿದರು.
ರಶೀದ್ ಈ ವಿಶೇಷ ದಾಖಲೆಯನ್ನು ತಮ್ಮ 102ನೇ ಪಂದ್ಯದಲ್ಲಿ ಸಾಧಿಸಿದರು. ರಶೀದ್ ಮುನ್ನ ಗ್ರೇಮ್ ಸ್ವಾನ್ ಇಂಗ್ಲೆಂಡ್ ಪರ ಹೆಚ್ಚು ವಿಕೆಟ್ ಪಡೆದ ಸ್ಪಿನ್ ಬೌಲರ್ ಎನಿಸಿಕೊಂಡಿದ್ದರು. ಅವರು ವೈಟ್ಬಾಲ್ ಕೆರಿಯರ್ನಲ್ಲಿ79 ಪಂದ್ಯಗಳಿಂದ 104 ವಿಕೆಟ್ ಪಡೆದಿದ್ದರು.
ವೇಗವಾಗಿ 150 ವಿಕೆಟ್ ಪಡೆದ ಇಂಗ್ಲೆಂಡ್ ಬೌಲರ್ಗಳು
ಇನ್ನು ಇಂಗ್ಲೆಂಡ್ ಪರ ಹೆಚ್ಚು ವಿಕೆಟ್ ಪಡೆದ ದಾಖಲೆ ಹಿರಿಯ ವೇಗಿ ಜೇಮ್ಸ್ ಆ್ಯಂಡರ್ಸನ್ ಅವರ ಹೆಸರಿನಲ್ಲಿದೆ. ಅವರು 194 ಪಂದ್ಯಗಳಲ್ಲಿ 269 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಜಿಮ್ಮಿ ನಂತರ ಡರೇನ್ ಗಾಫ್(234), ಸ್ಟುವರ್ಟ್ ಬ್ರಾಡ್(178), ಆ್ಯಂಡ್ರ್ಯೂ ಫ್ಲಿಂಟಾಫ್(168) ಹಾಗೂ ರಶೀದ್(150) ಇದ್ದಾರೆ.
ಇಂಗ್ಲೆಂಡ್ ಪ್ರವಾಸಿ ಐರ್ಲೆಂಡ್ ವಿರುದ್ಧ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ 4 ವಿಕೆಟ್ಗಳಿಂದ ಜಯ ಸಾದಿಸಿತು. ಈ ಮೂಲಕ ಇನ್ನು ಒಂದು ಪಂದ್ಯ ಬಾಕಿಯುಳಿದಿರುವಂತೆ ಏಕದಿನ ಸರಣಿ ವಶಪಡಿಸಿಕೊಂಡಿದೆ.